ಕರ್ನಾಟಕ

karnataka

ETV Bharat / state

ದೇಣಿಗೆ ಸಂಗ್ರಹಿಸಿಲ್ಲ, ಎಲ್ಲ ಖರ್ಚು ನಾನೇ ಭರಿಸುವೆ: ಉಪೇಂದ್ರ - ತುಮಕೂರು

ಇದು ಹಣ ಬಲವಿಲ್ಲದೆಯೂ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನ - ನಟ ಉಪೇಂದ್ರ

ಉತ್ತಮ ಪ್ರಜಾಕೀಯ

By

Published : Apr 5, 2019, 6:02 AM IST

ತುಮಕೂರು: ಸಂಪೂರ್ಣ ಬದಲಾವಣೆ ಉತ್ತಮ ಪ್ರಜಾಕೀಯ ಪಕ್ಷದ ಪ್ರಯತ್ನವಾಗಿದ್ದು, ಯಾವುದೇ ರೀತಿಯಿಂದಲೂ ದೇಣಿಗೆ ಸಂಗ್ರಹಿಸದ ಪಕ್ಷವಾಗಿದೆ. ಎಷ್ಟೇ ಖರ್ಚು ಬಂದರೂ ಅದನ್ನು ನಾನೇ ಭರಿಸುತ್ತಿದ್ದೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ ಬಲವಿಲ್ಲದೆಯೂ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬಹುದು ಎಂಬ ಸಂದೇಶ ಸಾರುವ ಪ್ರಯತ್ನವಾಗಿದೆ ಎಂದರು.

ಉತ್ತಮ ಪ್ರಜಾಕೀಯ

ಇದಕ್ಕಾಗಿ ಎಲ್ಲ ವರ್ಗದಿಂದಲೂ ಜನರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ತುಮಕೂರು ಲೋಕಸಭಾ ಅಭ್ಯರ್ಥಿ ಛಾಯಾ ಮೋಹನ್ ಹಾಜರಿದ್ದರು.

ABOUT THE AUTHOR

...view details