ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಪಾಡಲು ತುಮಕೂರು ಸಿಇಓ ಹೊಸ ಪ್ಲ್ಯಾನ್! - Use of plants in KDP meeting tumakuru

ತುಮಕೂರು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಕುಳಿತುಕೊಳ್ಳುವಂತಹ ಕುರ್ಚಿಗಳ ಪಕ್ಕದಲ್ಲಿ ಒಂದು ಗಿಡ ಬಿಟ್ಟು ಸಾಮಾಜಿಕ ಅಂತರ ನೆನಪಿಸುವ ಪ್ರಯತ್ನವನ್ನು ಶುಭಾ ಕಲ್ಯಾಣ್ ಮಾಡಿದ್ದರು.

Tumkur
ಕೆಡಿಪಿ ಸಭೆಯಲ್ಲಿ ಗಿಡಗಳ ಬಳಕೆ

By

Published : Aug 9, 2020, 9:27 PM IST

ತುಮಕೂರು: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಾಮಾಜಿಕ ಅಂತರವನ್ನು ಮರೆಯಬಾರದು ಎಂಬ ಉದ್ದೇಶದಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಹೊಸ ಪ್ಲ್ಯಾನ್ ರೂಪಿಸಿದ್ದರು.

ಸಾಮಾಜಿಕ ಅಂತರ ನಿಯಮ ಪಾಲಿಸಲು ಕೆಡಿಪಿ ಸಭೆಯಲ್ಲಿ ಗಿಡಗಳ ಬಳಕೆ

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು, ಕುಳಿತುಕೊಳ್ಳುವಂತಹ ಕುರ್ಚಿಗಳ ಪಕ್ಕದಲ್ಲಿ ಒಂದು ಗಿಡ ಬಿಟ್ಟು ಸಾಮಾಜಿಕ ಅಂತರವನ್ನು ನೆನಪಿಸುವ ಪ್ರಯತ್ನ ಮಾಡಿದ್ದರು. ಇದಕ್ಕಾಗಿ ಇನ್ನೂರಕ್ಕೂ ಹೆಚ್ಚು ಗಿಡಗಳನ್ನು ಸಭಾಂಗಣದಲ್ಲಿ ಬಳಸಿಕೊಂಡಿದ್ದರು. ಈ ಕಾರ್ಯ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.

ಇಂತಹ ಪ್ರಯೋಗವನ್ನು ಇದೇ ಮೊದಲ ಬಾರಿಗೆ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಯಿತು.

ABOUT THE AUTHOR

...view details