ಕರ್ನಾಟಕ

karnataka

ಐಟಿ ದಾಳಿ ಬಗ್ಗೆ ಪ್ರತ್ಯೇಕ ವ್ಯಾಖ್ಯಾನ ಅಗತ್ಯವಿಲ್ಲ : ಕೇಂದ್ರ ಸಚಿವ ನಾರಾಯಣಸ್ವಾಮಿ

By

Published : Oct 13, 2021, 5:48 PM IST

ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವಿಚಾರವಾಗಿ ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಐಟಿ ದಾಳಿಗೆ ಪ್ರತ್ಯೇಕ ವ್ಯಾಖ್ಯಾನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Union Minister Narayanaswamy…
ಕೇಂದ್ರ ಸಚಿವ ನಾರಾಯಣಸ್ವಾಮಿ

ತುಮಕೂರು:ಆದಾಯ ತೆರಿಗೆ ಇಲಾಖೆಯವರು ಸ್ವಾಯತ್ತ ಅಧಿಕಾರ ಹೊಂದಿದ್ದಾರೆ. ಪ್ರತಿದಿನ ದಾಳಿಗಳು ನಡೆಯುತ್ತಿರುತ್ತವೆ. ರಾಜ್ಯದಲ್ಲಿಇತ್ತೀಚೆಗೆ ನಡೆದ ದಾಳಿ ಕುರಿತು ಪ್ರತ್ಯೇಕವಾದ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಕುರಿತು ನಿಯಂತ್ರಣ ಅವಶ್ಯಕತೆ ಇದೆ ಎಂದು ದೇಶದ ನಾಗರಿಕನಾಗಿ ಹೇಳುತ್ತೇನೆ. ಈ ಬಗ್ಗೆ ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಲಾಗುತ್ತಿದೆ. ಆದರೆ ಕಾಂಗ್ರೆಸ್​​​ನವರು ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ತೆರಿಗೆ ಕಡಿಮೆ ಮಾಡಬೇಕಿದೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬೊಮ್ಮಾಯಿಯವರು ತೆರಿಗೆ ಕಡಿಮೆ ಮಾಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದರು.

ಸದಾಶಿವ ಮತ್ತು ನಾಗಮೋಹನದಾಸ್ ಆಯೋಗದ ಬಗ್ಗೆ ಸದನನಲ್ಲಿ ಚರ್ಚೆಯಾಗದರೆ ಪೂರಕವಾಗಿರುತ್ತದೆ. ಕೇಂದ್ರ ಸಚಿವನಾಗಿ ಈ ಕುರಿತಂತೆ ಸಿಎಂ ಜೊತೆ ಸಮಲೋಚನೆ ನಡೆಸಿದ್ದೇನೆ. ಈ ಎರಡು ಆಯೋಗಗಳ ವರದಿಗಳು ಸದನದಲ್ಲಿ ಚರ್ಚೆಗೆ ಬರಬೇಕಿದೆ ಎಂದು ತಿಳಿಸಿದರು.

ಹೆಚ್​ ಡಿ ಕುಮಾರಸ್ವಾಮಿ ಯಾವಾಗ ಏನೇನು ಬೇಕೋ ಅದನ್ನು ಮಾತನಾಡುತ್ತಾರೆ. ಸಿದ್ದರಾಮಯ್ಯ, ಯಡಿಯೂರಪ್ಪ, ಆರ್​ಎಸ್ಎಸ್ ಬಗ್ಗೆಯೂ ಮತಾನಾಡುತ್ತಾರೆ. ಜಮ್ಮು-ಕಾಶ್ಮೀರದಲ್ಲಿ ಪಂಡಿತರನ್ನು ಹತ್ಯೆ ಮಾಡುತ್ತಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಹೀಗಾಗಿ ಇವರು ಯಾರ ಪರವಾಗಿ ಇದ್ದಾರೆ ಎಂಬುದನ್ನು ಜನ ತೀರ್ಮಾನಿಸುತ್ತಾರೆ ಎಂದರು.

ಇದನ್ನೂ ಓದಿ: ಡೀಲಿಂಗ್​​ ಸಂಭಾಷಣೆ ಡಿಕೆಶಿಯನ್ನು ಮುಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರ: ಕಟೀಲ್​

ABOUT THE AUTHOR

...view details