ತುಮಕೂರು: ಪಡಿತರ ವ್ಯವಸ್ಥೆಯಲ್ಲಿನ ಮಾನದಂಡಗಳನ್ನು ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿರುವುದನ್ನಷ್ಟೇ ನಾವು ಅನುಷ್ಠಾನ ಗೊಳಿಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಪಡಿತರ ವ್ಯವಸ್ಥೆ ಮಾನದಂಡವನ್ನೇ ಅನುಷ್ಠಾನಗೊಳಿಸುತ್ತೇವೆ.. ಸಚಿವ ಉಮೇಶ್ ಕತ್ತಿ - tumakuru news
ಎಪಿಎಲ್‌ನವರು ಸಹ ಬಿಪಿಎಲ್ ಕಾರ್ಡ್ ತೆಗೆದುಕೊಂಡಿದ್ದಾರೆ. ಅಂತಹ ಕಾರ್ಡ್ಗಳನ್ನು ತೆಗೆದು ಹಾಕಲಾಗುವುದು..
'ಸಿದ್ದರಾಮಯ್ಯ ಮಾಡಿದ್ದ ಪಡಿತರ ವ್ಯವಸ್ಥೆ ಮಾನದಂಡವನ್ನೇ ಅನುಷ್ಠಾನ ಮಾಡುತ್ತಿದ್ದೇವೆ'
ಶ್ರೀ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು, ಎಪಿಎಲ್‌ನವರು ಸಹ ಬಿಪಿಎಲ್ ಕಾರ್ಡ್ ತೆಗೆದುಕೊಂಡಿದ್ದಾರೆ. ಅಂತಹ ಕಾರ್ಡ್ಗಳನ್ನು ತೆಗೆದು ಹಾಕಲಾಗುವುದು ಎಂದರು.
ಬಡವರಿಗೆ ಯೋಗ್ಯ ಆಹಾರವನ್ನು ನೀಡುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ ಎಂದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.