ಕರ್ನಾಟಕ

karnataka

ETV Bharat / state

ಅಕ್ರಮ ಮರಳು ದಂಧೆಗೆ ಸಾಥ್ ನೀಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು - ತುಮಕೂರು ಪೊಲೀಸ್ ಸಿಬ್ಬಂದಿ ಅಮಾನತ್ತು

ಅಕ್ರಮ ಮರಳು ದಂಧೆಗೆ ಸಹಕರಿಸಿದ್ದ ಆರೋಪದ ಮೇರೆಗೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಅಕ್ರಮ ಮರಳು ದಂಧೆಗೆ ಸಾಥ್ ನೀಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತ್ತು

By

Published : Nov 20, 2019, 10:42 AM IST

ತುಮಕೂರು:ಅಕ್ರಮ ಮರಳು ದಂಧೆಗೆ ಸಹಕರಿಸಿದ್ದ ಆರೋಪದ ಮೇರೆಗೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ. ನ. ವಂಸಿ ಕೃಷ್ಣ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಟ್ಟನಾಯಕನಹಳ್ಳಿಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಹೆಚ್.ಕೆ. ಶಿವಕುಮಾರ್ ಮತ್ತು ತಾವರೆಕೆರೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಎಲ್.ಜಿ. ಗಿರೀಶ್ ಅಮಾನತುಗೊಂಡವರಾಗಿದ್ದಾರೆ.

ABOUT THE AUTHOR

...view details