ತುಮಕೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಪರಸ್ಪರ ಮಾರಾಮಾರಿ ನಡೆದ ಘಟನೆ ವಿನಾಯಕ ನಗರ ಬಡಾವಣೆಯಲ್ಲಿ ಜರುಗಿದೆ.
ತುಮಕೂರಲ್ಲಿ ನಡು ರಸ್ತೆಯಲ್ಲೇ ಗುಂಪುಗಳ ನಡುವೆ ಮಾರಾಮಾರಿ - ತುಮಕೂರು ನಗರ ಪೊಲೀಸ್ ಠಾಣೆ
ತುಮಕೂರಲ್ಲಿ ನಡು ರಸ್ತೆಯಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತುಮಕೂರಲ್ಲಿ ನಡು ರಸ್ತೆಯಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ
ವಿನಾಯಕ ನಗರದ ಮುಖ್ಯ ರಸ್ತೆಯಲ್ಲಿ ಎರಡೂ ಗುಂಪುಗಳು ಪರಸ್ಪರ ದೊಣ್ಣೆ, ಬ್ಯಾಟ್ ಹಿಡಿದುಕೊಂಡು ಬಡಿದಾಡಿಕೊಂಡಿವೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ಮಾರಾಮಾರಿಯ ದೃಶ್ಯ ಸೆರೆಯಾಗಿದೆ.
ಜಗಳ ತಡೆಯಲು ಬಂದಿದ್ದ ಮಹಿಳೆಯರ ಮೇಲೂ ಹಲ್ಲೆ ಮಾಡಲಾಗಿದೆ. ಸಂಜಯ್, ಬಸವರಾಜು ಎಂಬಿಬ್ಬರ ಯುವಕರ ಗುಂಪಿನ ನಡುವೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.