ಕರ್ನಾಟಕ

karnataka

ETV Bharat / state

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕ್ಯಾಂಪಸ್​ಗೆ ತುಮಕೂರು ವಿವಿ ಸ್ಥಳಾಂತರ

ಮುಂಬರುವ ಶೈಕ್ಷಣಿಕ ವರ್ಷದಿಂದ ತುಮಕೂರು ವಿಶ್ವವಿದ್ಯಾನಿಲಯವು ಹೊಸ ಕ್ಯಾಂಪಸ್​​ಗೆ ಸ್ಥಳಾಂತರವಾಗಲಿದೆ. 240 ಎಕರೆ ವಿಸ್ತೀರ್ಣದ ಹೊಸ ಕ್ಯಾಂಪಸ್​ನ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಕ್ಯಾಂಪಸ್ ಪೂರ್ಣಗೊಳ್ಳಲಿದೆ.

tumkuru university to shift new college campus
ಹೊಸ ಕ್ಯಾಂಪಸ್​ಗೆ ತುಮಕೂರು ವಿವಿ ಸ್ಥಳಾಂತರ

By

Published : Mar 31, 2021, 8:56 AM IST

ತುಮಕೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ತುಮಕೂರು ವಿಶ್ವವಿದ್ಯಾನಿಲಯವು ತುಮಕೂರು ಹೊರವಲಯದ ಬಿದರಕಟ್ಟೆ ಸಮೀಪದ ಹೊಸ ಕ್ಯಾಂಪಸ್​​ಗೆ ಸ್ಥಳಾಂತರವಾಗಲಿದೆ ಎಂದು ಕುಲಪತಿ ಕರ್ನಲ್ ಪ್ರೊ. ವೈ ಎಸ್​ ಸಿದ್ದೇಗೌಡ ತಿಳಿಸಿದರು.

ಹೊಸ ಕ್ಯಾಂಪಸ್​ಗೆ ತುಮಕೂರು ವಿವಿ ಸ್ಥಳಾಂತರ

ಹೊಸ ಕ್ಯಾಂಪಸ್​​ಗೆ ಮಂಗಳವಾರ ಭೇಟಿ ನಡೆಸಿ ಸಿದ್ದತೆ ಬಗ್ಗೆ ಅವರು ಪರಿಶೀಲನೆ ನಡೆಸಿದರು. ಸ್ನಾತಕೋತ್ತರ ಸಮಾಜಕಾರ್ಯ, ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವಶಾಸ್ತ್ರ ಹಾಗೂ ಪರಿಸರ ವಿಜ್ಞಾನ ವಿಭಾಗಗಳು ಹೊಸ ಶೈಕ್ಷಣಿಕ ವರ್ಷದಿಂದ ಬಿದರಕಟ್ಟೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.

ಲಭ್ಯ ಇರುವ ಅನುದಾನದಿಂದ 240 ಎಕರೆ ವಿಸ್ತೀರ್ಣದ ಹೊಸ ಕ್ಯಾಂಪಸ್​ನ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಕ್ಯಾಂಪಸ್ ಪೂರ್ಣಗೊಳ್ಳಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕ್ಯಾಂಪಸ್ ಮೂಡಿ ಬರಲಿದೆ ಎಂದರು. ಮುಂದಿನ ವರ್ಷದ ವೇಳೆಗೆ ಕನಿಷ್ಠ 12 ವಿಭಾಗಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಷ್ಟು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮಹಿಳಾ ವಿದ್ಯಾರ್ಥಿ ನಿಲಯ, ಪುರುಷ ವಿದ್ಯಾರ್ಥಿ ನಿಲಯ ಹಾಗೂ ಸಂಶೋಧನಾರ್ಥಿಗಳ ವಸತಿಗೃಹ - ಹೀಗೆ ರೂ. 17.5 ಕೋಟಿ ವೆಚ್ಚದ ಮೂರು ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಒಂದೆರಡು ತಿಂಗಳಲ್ಲಿ ಬಳಕೆಗೆ ಸಿದ್ಧವಾಗಲಿವೆ. ಸಮಾಜಕಲ್ಯಾಣ ಇಲಾಖೆಯ ಅನುದಾನದಿಂದ ಇವುಗಳ ನಿರ್ಮಾಣ ಸಾಧ್ಯವಾಗಿದೆ ಎಂದರು.

ರೂ. 1.19 ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಹಿಂದೆ ಸರ್ಕಾರದಿಂದ ಮಂಜೂರಾದರೂ.40 ಕೋಟಿ ರೂ ಹಣ ಇನ್ನೂ ಬಿಡುಗಡೆಯಾಗಿಲ್ಲ. ಹೊಸ ಕ್ಯಾಂಪಸ್ ಪೂರ್ಣಗೊಳ್ಳಲು ಏನಿಲ್ಲವೆಂದರೂ ರೂ. 250 ಕೋಟಿ ಅನುದಾನದ ಅವಶ್ಯಕತೆಯಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯಕ್ಕೆ ಸಮಾಜಕಲ್ಯಾಣ ಇಲಾಖೆಯ ಅನುದಾನ ಹಾಗೂ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲಗಳನ್ನು ಬಳಸಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.

ಕಲಾಭವನ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ವಿಜ್ಞಾನ ಕೇಂದ್ರಗಳ ಕಾಮಗಾರಿಗಳು ಕೂಡ ಪ್ರಗತಿಯಲ್ಲಿವೆ. ‘ವಿಜ್ಞಾನ ಜಗತ್ತು’ ಪರಿಕಲ್ಪನೆ ಸಾಕಾರಗೊಳ್ಳುತ್ತಿದ್ದು, ಅದಕ್ಕಾಗಿ 80 ಎಕರೆ ಜಾಗ ಮೀಸಲಿಡಲಾಗಿದೆ. ಕಾಮಗಾರಿಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದಕ್ಕಾಗಿಎಸ್ಐಟಿ, ಎಸ್ಎಸ್ಐಟಿ ಹಾಗೂ ಲೋಕೋಪಯೋಗಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಗುಣಮಟ್ಟ ಪರಿಶೀಲನಾ ಸಮಿತಿ ರಚಿಸಲಾಗಿದೆ.

ABOUT THE AUTHOR

...view details