ಕರ್ನಾಟಕ

karnataka

ETV Bharat / state

ಅವ್ಯವಸ್ಥೆಯ ಆಗರವಾದ ಪುರುಷ ವಿದ್ಯಾರ್ಥಿಗಳ ಹಾಸ್ಟೆಲ್​​: ಶೌಚಾಲಯದ ನೀರಿನಿಂದ ಅಡುಗೆ! - ತುಮಕೂರು ಪುರುಷ ಹಾಸ್ಟೆಲ್​​ನಲ್ಲಿ ಪ್ರತಿಭಟನೆ

ತುಮಕೂರಿನ ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯದ ನೀರನ್ನ ಬಳಸಿ ಅಡುಗೆ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಊಟ-ತಿಂಡಿ ತ್ಯಜಿಸಿ ಧರಣಿ ನಡೆಸಿದ್ದಾರೆ.

protest
ಅವ್ಯವಸ್ಥೆಯ ಆಗರವಾದ ಪುರುಷ ವಿದ್ಯಾರ್ಥಿಗಳ ಹಾಸ್ಟೆಲ್

By

Published : Jan 13, 2020, 9:03 PM IST

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಪುರುಷರ ವಿದ್ಯಾರ್ಥಿ ನಿಲಯ ಸಮಸ್ಯೆಗಳ ಆಗರವಾಗಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಸ್ಟೆಲ್​​ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ಹಾಸ್ಟೆಲ್ ನ ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸದೆ ಪ್ರತಿಭಟನೆ ನಡೆಸಿದರು.

ಅವ್ಯವಸ್ಥೆಯ ಆಗರವಾದ ಪುರುಷ ವಿದ್ಯಾರ್ಥಿಗಳ ಹಾಸ್ಟೆಲ್

ಸ್ನಾನ ಹಾಗೂ ಶೌಚಾಲಯಕ್ಕೆ ಬಳಸುವ ನೀರನ್ನು ಅಡುಗೆಗೆ ಬಳಸಲಾಗುತ್ತಿದೆ. ಈ ಹಿಂದೆ ಇದ್ದಂತಹ ಊಟದ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ.ಅಡುಗೆ ಸಿಬ್ಬಂದಿಗೆ ಅಗತ್ಯವಾದ ಸಾಮಾಗ್ರಿಗಳನ್ನು ನೀಡುತ್ತಿಲ್ಲ, ಶೌಚಾಲಯಕ್ಕೆ ಸರಿಯಾದ ಬಾಗಿಲಿನ ವ್ಯವಸ್ಥೆ ಇಲ್ಲ ಸೋಲಾರ್ ಹೇಳಿಕೊಳ್ಳಲು ಇದೆ. ಆದರೆ ಸ್ನಾನ ಮಾಡಲು ಬಿಸಿ ನೀರು ಬರುವುದಿಲ್ಲ ಮುಂತಾದ ಸಮಸ್ಯೆಗಳನ್ನು ಇಟ್ಟುಕೊಂಡು ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಸತೀಶ್, ಈ ಹಾಸ್ಟೆಲ್ ಕುಲಪತಿಗಳ ಹಾಗೂ ಪರೀಕ್ಷಾಂಗ ಕುಲಸಚಿವರ ವ್ಯಾಪ್ತಿಗೆ ಸೇರಲಿದೆ, ಕಳೆದ ಎರಡು ವರ್ಷಗಳಿಂದಲೂ ಸಮಸ್ಯೆಗಳು ಎದುರಾಗುತ್ತಿದ್ದು, ಅನುಸರಣೆ ಮಾಡಿಕೊಂಡು ಹೋಗುತ್ತಿದ್ದೇವೆ. ಈಗಾಗಲೇ ಕುಲಸಚಿವರಿಗೆ ಹಲವು ಬಾರಿ ಈ ಸಮಸ್ಯೆಗಳ ಬಗ್ಗೆ ಪತ್ರದ ಮೂಲಕ ತಿಳಿಸಿದ್ದೇವೆ, ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನು ಈ ಹಾಸ್ಟೆಲಿಗೆ ಸ್ಥಳೀಯರು ಪ್ರವೇಶ ಮಾಡುತ್ತಿದ್ದು ಧೂಮಪಾನ, ಮಧ್ಯಪಾನ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ನಮಗೆ ಏನಾದರೂ ತೊಂದರೆಯಾದರೆ ಎಂದು ಕೇಳಲು ಹಿಂದೆಟಾಕುವ ಪರಿಸ್ಥಿತಿಯುಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details