ಕರ್ನಾಟಕ

karnataka

ETV Bharat / state

ಜಿಪಂ ಸಭೆಯಲ್ಲಿ ಸಚಿವ ಮಾಧುಸ್ವಾಮಿ, ಶಾಸಕ ಡಾ. ರಂಗನಾಥ ನಡುವೆ ಮಾತಿನ ಚಕಮಕಿ - Minister Madhuswamy

ಆ ರೀತಿಯ ವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಿ. ಗೊಂದಲ ಸೃಷ್ಟಿಯಾಗಿದ್ದು 2017ರಲ್ಲಿಯೇ ಹೊರತು ನಾನು ಶಾಸಕನಾದ ಮೇಲೆ ಅಲ್ಲ..

Tumkur Zilla Panchayat Meeting ತುಮಕೂರು ಜಿಲ್ಲಾ ಪಂಚಾತಿಯಿ ಸಭೆ
ತುಮಕೂರು ಜಿಲ್ಲಾ ಪಂಚಾತಿಯಿ ಸಭೆ

By

Published : Aug 7, 2020, 5:15 PM IST

ತುಮಕೂರು :ಕುಣಿಗಲ್ ತಾಲೂಕು ವ್ಯಾಪ್ತಿಯಲ್ಲಿ ಮನೆ ಹಂಚಿಕೆ ಕುರಿತ ಗೊಂದಲದಿಂದಾಗಿ ರಾಜ್ಯದಲ್ಲಿಯೇ ವಸತಿ ಯೋಜನೆಗಳು ಸ್ಥಗಿತಗೊಂಡಂತಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಮಾಧುಸ್ವಾಮಿ ಪ್ರಸ್ತಾಪಿಸುತ್ತಿದ್ದಂತೆ, ಕುಣಿಗಲ್ ಶಾಸಕ ಡಾ. ರಂಗನಾಥ ಇದಕ್ಕೆ ಏರುಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸಿದ ಘಟನೆ ಜಿಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

ತುಮಕೂರು ಜಿಪಂ ಸಭೆಯೊಳಗೆ ಸಚಿವರು-ಶಾಸಕರ ನಡುವೆ ಮಾತಿನ ಜಟಾಪಟಿ

ಕುಣಿಗಲ್ ತಾಲೂಕಿನಲ್ಲಿ 38 ಮನೆಗಳನ್ನು ಹಂಚಿಕೆಯಲ್ಲಿ ಅವ್ಯವಹಾರ ನಡೆದ ಹಿನ್ನೆಲೆ ಇಡೀ ರಾಜ್ಯದಲ್ಲಿಯೇ ವಸತಿ ಹಂಚಿಕೆ ಪ್ರಕ್ರಿಯೆ ತಡವಾಗಿದೆ. ಅಲ್ಲದೇ ನಿಮ್ಮ ಕುಣಿಗಲ್ ತಾಲೂಕಿನಲ್ಲಿನ ಗೊಂದಲದಿಂದಾಗಿ ಸಂಪೂರ್ಣ ಪ್ರಕ್ರಿಯೆ ತಡವಾಗಿದೆ ಎಂದು ಸಚಿವ ಮಾಧುಸ್ವಾಮಿ ಪ್ರಸ್ತಾಪಸಿದರು.

ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಕುಣಿಗಲ್ ಶಾಸಕ ಡಾ. ರಂಗನಾಥ, ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಆ ರೀತಿಯ ವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಿ. ಗೊಂದಲ ಸೃಷ್ಟಿಯಾಗಿದ್ದು 2017ರಲ್ಲಿಯೇ ಹೊರತು ನಾನು ಶಾಸಕನಾದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಂತರ ಸಭೆಯಲ್ಲಿದ್ದ ಕೆಲ ಶಾಸಕರು ಇದಕ್ಕೆ ಧ್ವನಿಗೂಡಿಸಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಯಲಿ. ನಂತರ ಒಂದು ನಿರ್ಧಾರಕ್ಕೆ ಬರಲಿ ಎಂದು ಹೇಳಿದರು.

ಇದಕ್ಕೆ ಸಚಿವ ಮಾಧುಸ್ವಾಮಿ ಕೂಡ ತನಿಖೆ ನಡೆದ ಬಳಿಕ ವಿಚಾರ ಸ್ಪಷ್ಟವಾಗಿ ಬೆಳಕಿಗೆ ಬರಲಿದೆ ಎಂದು ಹೇಳಿದರು. ಇದರಿಂದ ಸಭೆಯಲ್ಲಿನ ಕೋಲಾಹಲದ ವಾತಾವರಣ ಶಮನಗೊಂಡಿತು.

ABOUT THE AUTHOR

...view details