ತುಮಕೂರು: ಜಮ್ಮು- ಕಾಶ್ಮೀರ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ತುಮಕೂರಿನ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿಯ ಯೋಧ ರಂಗಯ್ಯ (57) ವೀರಮರಣವನ್ನಪ್ಪಿದ್ದಾರೆ.
ಜಮ್ಮು - ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ: ತುಮಕೂರಿನ ಯೋಧ ಹುತಾತ್ಮ - ಪಾವಗಡ ತಾಲೂಕಿನ ಕೆ.ಟಿ.ಹಳ್ಳಿಯ ಯೋಧ ರಂಗಯ್ಯ
ಜಮ್ಮು - ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ತುಮಕೂರಿನ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ತುಮಕೂರಿನ ಯೋಧ ಹುತಾತ್ಮ
ದಾಸಣ್ಣ ಮತ್ತು ನಾಗಮ್ಮ ದಂಪತಿಯ ಮಗನಾಗಿ ಜನಿಸಿದ ರಂಗಯ್ಯ, ಕಳೆದ 35 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಗಡಿ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ರಂಗಯ್ಯ ಹುತಾತ್ಮರಾಗಿದ್ದಾರೆ. ಇಂದು ಯೋಧನ ಪಾರ್ಥಿವ ಶರೀರ ಪಾವಗಡಕ್ಕೆ ಆಗಮನವಾಗುವ ಸಾಧ್ಯತೆಯಿದ್ದು, ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.