ತುಮಕೂರು: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರ ನೋವಿಗೆ ತುಮಕೂರು ಜಿಲ್ಲಾ ಪೊಲೀಸರ ಮನ ಮಿಡಿದಿದೆ. 2.65 ಲಕ್ಷ ರೂ ಮೌಲ್ಯದ ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಿ ಕಳುಹಿಸಿ ಕೊಡುವ ಮೂಲಕ ನೆರೆ ಪೀಡಿತ ಪ್ರದೇಶದ ಜನರ ನೆರವಿಗೆ ಧಾವಿಸಿದ್ದಾರೆ.
ನೆರೆ ಸಂತ್ರಸ್ತರ ನೋವಿಗೆ ತುಮಕೂರು ಪೊಲೀಸರ ಸ್ಪಂದನೆ - ನೆರೆ ಸಂತ್ರಸ್ತರ ನೋವಿಗೆ ಪೊಲೀಸರ ಸ್ಪಂದನೆ
ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೋವಿಗೆ ತುಮಕೂರು ಜಿಲ್ಲಾ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ. ಸುಮಾರು 2.65 ಲಕ್ಷ ರೂ ಮೌಲ್ಯದ ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮದ 300 ಕುಟುಂಬಗಳಿಗೆ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.
ನೆರೆ ಸಂತ್ರಸ್ತರ ನೋವಿಗೆ ಪೊಲೀಸರ ಸ್ಪಂದನೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವ ಜಿಲ್ಲಾ ಪೊಲೀಸರು ಸುಮಾರು 300 ಕುಟುಂಬಗಳಿಗೆ ಅಗತ್ಯವಿರುವಷ್ಟು ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಸೀರೆ, ಟವಲ್, ಲುಂಗಿ, ಪಂಚೆ, ಬೆಡ್ ಶೀಟ್‌ಗಳು ಸೇರಿವೆ.