ಕರ್ನಾಟಕ

karnataka

ETV Bharat / state

ಮನೆಯಲ್ಲೇ ತಯಾರಿಸಿ ಉತ್ಕೃಷ್ಟ ಗೊಬ್ಬರ: ಕಸ ನಿರ್ವಹಣೆಗೆ ಪೈಪ್ ಕಾಂಪೋಸ್ಟ್ ಯೋಜನೆ - ಪೈಪ್​ ಕಾಂಪೋಸ್ಟ್ ಯೋಜನೆ 2020

ಕಸ ನಿರ್ವಹಣೆಯನ್ನು ಸರಳೀಕರಣಗೊಳಿಸಲು ಪೈಪ್ ಕಾಂಪೋಸ್ಟ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೈಪ್ ಕಾಂಪೋಸ್ಟ್ ಯೋಜನೆ
ಪೈಪ್ ಕಾಂಪೋಸ್ಟ್ ಯೋಜನೆ

By

Published : Dec 20, 2020, 7:23 AM IST

Updated : Dec 20, 2020, 10:44 AM IST

ತುಮಕೂರು: ನಗರ ಪ್ರದೇಶಗಳಲ್ಲಿ ಕಸ ನಿರ್ವಹಣೆ ಮಾಡುವುದೇ ಬಹುದೊಡ್ಡ ಸವಾಲಾಗಿರುತ್ತದೆ. ಇದನ್ನು ಸರಳೀಕರಣಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಜಿಲ್ಲೆಯಲ್ಲಿ ಸದ್ದಿಲ್ಲದೆ ಪ್ರತಿ ಮನೆ ಮನೆಯಲ್ಲಿ ಸ್ವತ: ಜನರು ಕನಿಷ್ಠ ಮಟ್ಟದಲ್ಲಿ ಕಸ ನಿರ್ವಹಣೆ ಮಾಡಿ ಗೊಬ್ಬರ ತಯಾರಿಸುವ ಮೂಲಕ ಸಮರ್ಥ ಬಳಕೆಗೆ ಮುಂದಾಗಿದ್ದಾರೆ.

ಹೌದು, ಜಿಲ್ಲೆಯ ಎಲ್ಲಾ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಪೈಪ್ ಕಾಂಪೋಸ್ಟ್ ಯೋಜನೆ ಮೂಲಕ ಜನರಲ್ಲಿ ಸುಲಭವಾಗಿ ಕಸ ನಿರ್ವಹಣೆ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ. ಸುಲಭ ಪ್ರಕಾರವಾಗಿರೋ ಪೈಪ್ ಕಾಂಪೋಸ್ಟ್ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ಪೈಪ್ ಕಾಂಪೋಸ್ಟ್ ಯೋಜನೆ

ಸುಮಾರು ಒಂದೂವರೆ ಅಡಿ ಉದ್ದದ ಅಗಲವಾದ ಪೈಪನ್ನು ನೆಲದಲ್ಲಿ ಹೂಳಲಾಗುವುದು. ಅಲ್ಲದೆ ಪೈಪ್ ಸುತ್ತಲೂ ಸಣ್ಣದಾದ ಅಲ್ಲಲ್ಲಿ ರಂಧ್ರಗಳನ್ನು ಕೊರೆಯಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಉತ್ಪತ್ತಿ ಆಗುವಂತಹ ಹಸಿ ಕಸವನ್ನು ಇದರೊಳಗೆ ಹಾಕಲಾಗುವುದು. ವಾರಕ್ಕೊಮ್ಮೆ ಸಗಣಿ ಅಥವಾ ಒಂದು ಹಿಡಿ ಮಣ್ಣನ್ನು ಒಳಗೆ ಹಾಕಬೇಕು. ಸುಮಾರು ಒಂದು ವರ್ಷ ಕಾಲ ಹಸಿ ಕಸವನ್ನು ಇದರೊಳಗೆ ಹಾಕುತ್ತ ಹೋದಂತೆ ಉತ್ಕೃಷ್ಟವಾದ ಗೊಬ್ಬರ ಉತ್ಪತ್ತಿಯಾಗಿರುತ್ತದೆ. ಮನೆಯ ಮುಂದಿನ ಹೂದೋಟದಲ್ಲಿ ಈ ಪ್ರಯೋಗವನ್ನು ಮಾಡಬಹುದಾಗಿದೆ. ನಂತರ ಉತ್ಪತ್ತಿಯಾಗುವ ಉತ್ಕೃಷ್ಟ ಗೊಬ್ಬರವನ್ನು ಗಿಡಗಳಿಗೆ ಹಾಕಿದರೆ ಗಿಡಗಳ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್​ಗೆ ನೂರರಿಂದ ಇನ್ನೂರು ಮನೆಗಳಲ್ಲಿ ಪೈಪ್ ಕಾಂಪೋಸ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ್ ಪೋಸ್ಟ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸದ್ದಿಲ್ಲದೆ ನಡೆದಿರುವ ಈ ಯೋಜನೆ ಮೂಲಕ ಬಹುತೇಕ ಕಸ ನಿರ್ವಹಣೆ ಮಾಡುವ ಹೊರೆ ಪಾಲಿಕೆ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗೆ ತಪ್ಪಿದಂತಾಗುತ್ತದೆ. ಅಲ್ಲದೇ ಇಲ್ಲಿ ಉತ್ಪತ್ತಿ ಆಗುವಂತಹ ಗುಣಮಟ್ಟದ ಗೊಬ್ಬರವನ್ನು ಖರೀದಿಸಲು ತೋಟದ ಮಾಲೀಕರು ಹಾಗೂ ರೈತರು ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂಬ ಅಭಿಪ್ರಾಯ ಪಾಲಿಕೆ ಸದಸ್ಯರದ್ದಾಗಿದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3000ಕ್ಕೂ ಹೆಚ್ಚು ಮನೆಗಳಲ್ಲಿ ಪೈಪ್ ಕಾಂಪೋಸ್ಟ್ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Last Updated : Dec 20, 2020, 10:44 AM IST

ABOUT THE AUTHOR

...view details