ಕರ್ನಾಟಕ

karnataka

ETV Bharat / state

ಜೀವನ ಸಂಧ್ಯಾಕಾಲದಲ್ಲಿ ತುಮಕೂರಿನ ವೃದ್ಧ ದಂಪತಿಯ ಪರಿಸರ ಕಾಳಜಿ: ಜನರ ಮೆಚ್ಚುಗೆ - ತುಮಕೂರಿನ ವೃದ್ಧ ದಂಪತಿಯ ಪರಿಸರ ಕಾಳಜಿ

ತುಮಕೂರು ನಗರದಲ್ಲಿ ವಾಸವಾಗಿರುವ ದಂಪತಿ ಪರಿಸರದ ಮೇಲೆ ಕಾಳಜಿ ಹೊಂದಿದ್ದು, ಅದಕ್ಕಾಗಿ ಮನೆಯಲ್ಲಿ ತಿಂದು ಹಣ್ಣಿನ ಬೀಜಗಳನ್ನು ಸಂಗ್ರಹಣೆ ಮಾಡಿ ಕಾಡಿನಲ್ಲಿ ಬಿತ್ತನೆ ಮಾಡುವ ಕೆಲಸ ಮಾಡುತ್ತಿದೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಯಲದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ತುಮಕೂರಿನ ವೃದ್ಧ ದಂಪತಿಯ ಪರಿಸರ ಕಾಳಜಿ
Tumkur old couple concerns about Environment

By

Published : Feb 18, 2021, 3:15 PM IST

Updated : Feb 18, 2021, 4:10 PM IST

ತುಮಕೂರು:ಮನೆಯಲ್ಲಿ ತಾವು ಹಣ್ಣನ್ನು ತಿಂದು ಅದರ ಬೀಜವನ್ನು ಹಾಗೆ ಎಸೆಯುತ್ತೇವೆ. ಆದರೆ, ಅದೇ ಬೀಜಗಳನ್ನು ಸಂಗ್ರಹಿಸಿ ಒಂದು ಕಾಡು ನಿರ್ಮಾಣ ಮಾಡಬಹುದು ಎಂಬುದನ್ನು ತೂಮಕೂರಿನ ಈ ವೃದ್ಧ ದಂಪತಿ ತೋರಿಸಿ ಕೊಟ್ಟಿದ್ದಾರೆ.

ತುಮಕೂರಿನ ವೃದ್ಧ ದಂಪತಿಯ ಪರಿಸರ ಕಾಳಜಿ

ಸರಸ್ವತಿ ನಗರದ ನಿವಾಸಿಯಾಗಿರುವ ಡಿ.ಎಸ್.ಪಂಡಿತ್ ಆರಾಧ್ಯ ಹಾಗೂ ಭ್ರಮರಾಂಭ ದಂಪತಿ ಕಳೆದೆರಡು ವರ್ಷದಿಂದ ತಮ್ಮ ಮನೆಯಲ್ಲಿ ತಿಂದ ಹಣ್ಣಿನ ಬೀಜಗಳನ್ನು ಸಂಗ್ರಹಣೆ ಮಾಡುತ್ತಾ ಬಂದಿದ್ದಾರೆ. ಈ ಬೀಜಗಳನ್ನು ಮಣ್ಣಿನಲ್ಲಿ ಉಂಡೆ ಮಾಡಿ, ಕಾಡಿಗೆ ಹೋಗಿ ಬಿತ್ತನೆ ಮಾಡಿ ಬರುತ್ತಿದ್ದಾರೆ. ಈ ಮೂಲಕ ಕಾಡನ್ನು ಬೆಳೆಸುವ ಉದ್ದೇಶವನ್ನು ಈ ದಂಪತಿ ಹೊಂದಿದೆ.

ತುಮಕೂರಿನ ವೃದ್ಧ ದಂಪತಿಯ ಪರಿಸರ ಕಾಳಜಿ

ಇವರು ಈಗಾಗಲೇ ಬೇಲ, ಪನ್ನೇರಲೆ, ಸೀತಾಫಲ, ಸೀಬೆ, ಹಲಸು, ಕಿತ್ತಲೆ ಹಣ್ಣಿನ ಬೀಜಗಳನ್ನು ಸಂಗ್ರಹ ಮಾಡಿ 300ಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ದೇವರಾಯನ ದುರ್ಗದ ಕಾಡಿನಲ್ಲಿ ಬಿತ್ತನೆ ಮಾಡಿದ್ದಾರೆ. ಅವು ಮರವಾಗಿ ಬೆಳೆದು ಸಮೃದ್ಧವಾದ ಕಾಡಾಗಿ ಬೆಳೆಯುತ್ತದೆ ಎಂಬುದು ವೃದ್ಧ ದಂಪತಿಯ ಆಶಯವಾಗಿದೆ.

ಓದಿ: ಡೆತ್​ ನೋಟ್​ ಬರೆದು ಯುವಕ ಆತ್ಮಹತ್ಯೆ: ಅಂತ್ಯಕ್ರಿಯೆಗೆ ಯಶ್​, ಮಾಜಿ ಸಿಎಂ ಸಿದ್ದರಾಮಯ್ಯ ಬರುವಂತೆ ಮನವಿ

ಪಂಡಿತ್ ಆರಾಧ್ಯರು ಸರ್ಕಾರಿ ನೌಕರಿಯಿಂದ ನಿವೃತ್ತಿಯಾದ ಬಳಿಕ ಅವರು ತಮ್ಮ ಪತ್ನಿಯ ಜೊತೆ ಸೇರಿ ಪ್ರತಿವರ್ಷ ಮರಗಿಡಗಳನ್ನು ನೆಡುವುದು ಸೇರಿದಂತೆ ಪರಿಸರ ಸಂರಕ್ಷಣೆಯ ಕಾರ್ಯ ಮಾಡುತ್ತಾ ಬಂದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಯಲದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Last Updated : Feb 18, 2021, 4:10 PM IST

ABOUT THE AUTHOR

...view details