ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ತಡೆಗೆ ಆನ್​ಲೈನ್ ಸೇವೆ ಅನುಷ್ಠಾನಕ್ಕೆ ತಂದ ತುಮಕೂರು ಪಾಲಿಕೆ - municipal reform cell

ಕೊರೊನಾ ಹರಡುವಿಕೆ ಭೀತಿ ಸರ್ಕಾರಿ ಕಚೇರಿಗಳಲ್ಲಿ ಒಂದು ರೀತಿಯ ಅವ್ಯಕ್ತ ಭಯ ಸೃಷ್ಟಿಸಿದೆ. ಈ ನಡುವೆಯೂ ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಬೇಕಿದೆ. ಹೀಗಾಗಿ ಅನೇಕ ಸರ್ಕಾರಿ ಕಚೇರಿಗಳಲ್ಲಿ ಜನರ ನೇರ ಸಂಪರ್ಕವಿಲ್ಲದೇ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಕಾರ್ಯಗಳು ಚಾಲ್ತಿಯಲ್ಲಿವೆ.

tumkur corporation
ತುಮಕೂರು ಪಾಲಿಕೆ

By

Published : Aug 19, 2020, 5:23 PM IST

ತುಮಕೂರು:ಕೊರೊನಾ ರೋಗ ಹರಡುವಿಕೆ ಭೀತಿ ಸರ್ಕಾರಿ ಕಚೇರಿಗಳಲ್ಲಿ ಒಂದು ರೀತಿಯ ಅವ್ಯಕ್ತ ಭಯ ಸೃಷ್ಟಿಸಿದೆ. ಈ ನಡುವೆ ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಬೇಕಿದೆ. ಹೀಗಾಗಿ ಅನೇಕ ಸರ್ಕಾರಿ ಕಚೇರಿಗಳಲ್ಲಿ ಜನರ ನೇರ ಸಂಪರ್ಕವಿಲ್ಲದೇ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೆಲಸ ಕಾರ್ಯಗಳನ್ನ ಮಾಡಲಾಗುತ್ತಿದೆ.

ತುಮಕೂರು ಪಾಲಿಕೆ

ತುಮಕೂರು ಮಹಾನಗರ ಪಾಲಿಕೆಯಲ್ಲಿ ಆರು ಮಂದಿ ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ರೀತಿ ಸೋಂಕಿಗೆ ಒಳಗಾಗುತ್ತಿರುವುದರಲ್ಲಿ ಸರ್ಕಾರಿ ಸಿಬ್ಬಂದಿ ಕೂಡಾ ಸೇರಿದ್ದು, ಸಾರ್ವಜನಿಕರು ಕೂಡ ಕಚೇರಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡ ತುಮಕೂರು ಮಹಾನಗರ ಪಾಲಿಕೆಯ ಪರ್ಯಾಯವಾಗಿ ವ್ಯವಸ್ಥೆ ಮಾಡಿದೆ.

ಮುನ್ಸಿಪಲ್ ರಿಫಾರ್ಮ್ಸ್ ಸೆಲ್ ಅನುಷ್ಠಾನಗೊಳಿಸಿದ ಪಾಲಿಕೆ..!

ಜನರ ಭೀತಿ ಹೋಗಲಾಡಿಸುವ ಸಲುವಾಗಿ ಪಾಲಿಕೆ ಮುನ್ಸಿಪಲ್​ ರಿಫಾರ್ಮ್​ ಸೆಲ್ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತಂದಿದೆ. ಈ ಸೆಲ್​ ಮೂಲಕ ​ ಖಾತಾ ಸಂಬಂಧಿ ಸೇವೆ, ನೀರಿನ ಕಂದಾಯ, ವ್ಯಾಪಾರಿ ಪರವಾನಗಿ, ಕಟ್ಟಡ ಪರವಾನಗಿ ಮುಂತಾದ ಸೇವೆಗಳನ್ನು ಸಾರ್ವಜನಿಕರು ಆನ್​ಲೈನ್​ನಲ್ಲಿ ಪಡೆಯಬಹುದಾಗಿದೆ.

www.mrc.com, www.bma.com, www.udd.com ವೆಬ್​ಸೈಟ್​​​ಗಳನ್ನು ಸಾರ್ವಜನಿಕರು ಬಳಸಿಕೊಂಡು ತುಮಕೂರು ಮಹಾನಗರ ಪಾಲಿಕೆಗೆ ಬಾರದೆಯೇ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಂತರ ತುಮಕೂರು ಮಹಾನಗರ ಪಾಲಿಕೆ ಒಯಸಿಸ್ ಎಂಬ ಸಾಫ್ಟ್​ವೇರ್​ ಬಳಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಅರ್ಜಿಗಳನ್ನು ಪರಿಶೀಲಿಸಿ, ವಿಲೇವಾರಿ ಮಾಡುತ್ತಾರೆ.

ಕೊರೊನಾ ಸೋಂಕು ಹರಡದಂತೆ ತುಮಕೂರು ಮಹಾನಗರ ಪಾಲಿಕೆ ಕೈಗೊಂಡಿರುವ ಈ ಆನ್​ಲೈನ್ ವ್ಯವಸ್ಥೆಯನ್ನು ತಂತ್ರಜ್ಞಾನದ ಅರಿವಿದ್ದವರು ಮಾತ್ರ ಬಳಸಿಕೊಳ್ಳಬಹುದಾಗಿದೆ. ಇದರಿಂದಾಗಿ ಶೇಕಡಾ 30ರಷ್ಟು ಮಂದಿ ಮಾತ್ರ ಈ ಆನ್​ಲೈನ್​ ಸೇವೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನುಳಿದವರು ಸ್ವಯಂ ಪ್ರೇರಿತರಾಗಿ ಅರ್ಜಿಗಳನ್ನು ಹಿಡಿದು ಪಾಲಿಕೆಗೆ ಬರುತ್ತಿದ್ದಾರೆ.

ABOUT THE AUTHOR

...view details