ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ 23 ಅಭ್ಯರ್ಥಿಗಳ ಪೈಕಿ 4 ನಾಮಪತ್ರ ತಿರಸ್ಕೃತಗೊಂಡಿವೆ. ಉಳಿದ 19 ಮಂದಿಯ ಉಮೇದುವಾರಿಕೆಗಳು ಸಿಂಧು ಆಗಿವೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ - ಉತ್ತಮ ಪ್ರಜಾಕೀಯ ಪಕ್ಷ
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ 4 ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಮಾರ್ಚ್ 29 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ದೇವೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಸ್ ಬಸವರಾಜು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಎಂ.ಆರ್ ಛಾಯಾ ಮೋಹನ್, ಭಾರತ ಕಮ್ಯುನಿಸ್ಟ್ ಪಕ್ಷದ ಎನ್. ಶಿವಣ್ಣ, ಬಹುಜನ ಸಮಾಜ ಪಕ್ಷದ ಕೆ. ಸಿ. ಹನುಮಂತರಾಯ, ಅಂಬೇಡ್ಕರ್ ಸಮಾಜ ಪಾರ್ಟಿ ಸಿ.ಪಿ. ಮಹಾಲಕ್ಷ್ಮಿ,
ಪಕ್ಷೇತರ ಅಭ್ಯರ್ಥಿಗಳಾದ ಉದಯಶಂಕರ್ , ಕಪನಿ ಗೌಡ , ಸಿ ಎಂ ಕುಮಾರಸ್ವಾಮಿ, ಹೆಚ್ ಎನ್ ನಾಗಾರ್ಜುನ ,ನಾಗೇಂದ್ರ, ಆರ್.ಎ ಪ್ರಕಾಶ್, ಬಿ.ಎಸ್ ಮಲ್ಲಿಕಾರ್ಜುನ್ , ಎಸ್ಪಿ ಮುದ್ದಹನುಮೇಗೌಡ, ಕೆ.ಎನ್ ರಾಜಣ್ಣ, ಕೆ.ವಿ ಶ್ರೀನಿವಾಸ್, ಜಿ.ಕೆ ಸಮಿ, ಸಿದ್ದರಾಮಯ್ಯ ಟಿ.ಬಿ ಅವರ ನಾಮಪತ್ರಗಳು ಸಿಂಧುವಾಗಿವೆ.