ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದು 259 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 7144ಕ್ಕೇರಿಕೆಯಾಗಿದೆ.
ತುಮಕೂರು ಜಿಲ್ಲೆಯಲ್ಲಿ ಇಂದು 259 ಮಂದಿಗೆ ಕೊರೊನಾ - ತುಮಕೂರು ಲೇಟೆಸ್ಟ್ ಕೊರೊನಾ ರಿಪೋರ್ಟ್
ತುಮಕೂರು ಜಿಲ್ಲೆಯಲ್ಲಿ ಇಂದು ಒಟ್ಟು 259 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ತುಮಕೂರು ತಾಲೂಕು ಒಂದರಲ್ಲಿ 105 ಮಂದಿಗೆ ಸೋಂಕು ತಗುಲಿದೆ. ಇಂದು ಮೂವರು ಸೋಂಕಿನಿಂದ ಮೃತಪಟ್ಟಿದ್ದು ಇದುವರೆಗೂ 176 ಮಂದಿ ಮೃತಪಟ್ಟಂತಾಗಿದೆ.
ಇಂದು ತುಮಕೂರು ತಾಲೂಕು ಒಂದರಲ್ಲಿ 105 ಮಂದಿಗೆ ಸೋಂಕು ತಗುಲಿದೆ. ಶಿರಾ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 28 ಮಂದಿಗೆ, ಪಾವಗಡ ಮತ್ತು ಗುಬ್ಬಿ ತಾಲೂಕಿನಲ್ಲಿ ತಲಾ 26 ಮಂದಿಗೆ, ಮಧುಗಿರಿ ತಾಲೂಕಿನಲ್ಲಿ 24 ಮಂದಿಗೆ, ತುರುವೇಕೆರೆ ತಾಲೂಕಿನಲ್ಲಿ 9 , ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 6, ಕುಣಿಗಲ್ ತಾಲೂಕಿನಲ್ಲಿ 4, ಕೊರಟಗೆರೆ ತಾಲೂಕಿನಲ್ಲಿ ಮೂವರಿಗೆ ಸೋಂಕು ತಗುಲಿದೆ.
ಇಂದು 226 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 5169 ಮತ್ತು ಸಂಪೂರ್ಣ ಗುಣಮುಖರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 29 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮೂವರು ಸೋಂಕಿನಿಂದ ಮೃತಪಟ್ಟಿದ್ದು ಇದುವರೆಗೂ 176 ಮಂದಿ ಮೃತಪಟ್ಟಂತಾಗಿದೆ.