ಕರ್ನಾಟಕ

karnataka

ETV Bharat / state

ಲೀಟರ್​​​​​​​​ ಹಾಲಿಗೆ 1.5 ರೂ. ಹೆಚ್ಚಿಸಿದ ತುಮಕೂರು ಕೆಎಂಎಫ್​​​ - ತುಮಕೂರು ಹಾಲು ಒಕ್ಕೂಟ

ತುಮಕೂರಿನಲ್ಲಿ ಪ್ರತಿ ಲೀಟರ್​ ಹಾಲಿಗೆ ಆಗಸ್ಟ್​ನಿಂದ 1.5 ರೂ. ಹೆಚ್ಚುವರಿಯಾಗಿ ರೈತರಿಗೆ ನೀಡಲು ತುಮಕೂರು ಹಾಲು ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ.

ತುಮಕೂರು ಹಾಲು ಒಕ್ಕೂಟ

By

Published : Aug 1, 2019, 6:01 PM IST

ತುಮಕೂರು:ಜಿಲ್ಲೆಯಲ್ಲಿ ತೀವ್ರ ಬರಗಾಲ ಇರುವ ಕಾರಣ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಆಗಸ್ಟ್ 1ರಿಂದ ಪ್ರತಿ ಲೀಟರ್ ಹಾಲಿಗೆ 1.50 ರೂ. ಹೆಚ್ಚುವರಿಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3.5 ಜಿಡ್ಡಿನ ಅಂಶ ಇರುವ ಹಾಲು ಉತ್ಪಾದಕರಿಗೆ 25, ಸಂಘಗಳಿಗೆ 25.73 ರೂ.ನಂತೆ ನೀಡಲಾಗುವುದು. 4.1 ಜಿಡ್ಡಿನ ಅಂಶ ಇರುವ ಹಾಲು ಉತ್ಪಾದಕರಿಗೆ 26.28 ರೂ. ಮತ್ತು ಸಂಘಗಳಿಗೆ 27.01 ರೂ. ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದರೂ ತುಮಕೂರು ಸಹಕಾರಿ ಹಾಲು ಒಕ್ಕೂಟದ ಹಾಲು ಶೇಖರಣೆ ದಿನೇ ದಿನೇ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. 2019ರ ಜೂನ್ 18ರಂದು 8,01,313 ಲೀಟರ್ ಹಾಲು ಸಂಗ್ರಹವಾಗಿದ್ದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ ಎಂದು ತಿಳಿಸಿದರು.

2018-19ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ 6,71,712 ಲೀಟರ್ ಶೇಖರಣೆ ಆಗುತ್ತಿದೆ. ಒಕ್ಕೂಟದ ವತಿಯಿಂದ ಮುಂಬೈ ಮಹಾನಗರದಲ್ಲಿ 2018-19ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ 84,896 ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಜುಲೈ 23ರಂದು 1,13,780 ಲೀಟರ್ ಹಾಲಿನ ಮಾರಾಟ ಮಾಡಿ ದಾಖಲೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಣೆ ಮಾಡಿಕೊಂಡಿರುವುದರಿಂದ ಅಧಿಕ ಹಾಲು ಶೇಖರಣೆ ಆದರೂ ಸಹ ಡೈರಿಯಲ್ಲಿ ನಿರ್ವಹಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.

ABOUT THE AUTHOR

...view details