ಕರ್ನಾಟಕ

karnataka

ETV Bharat / state

774 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ನಿರೀಕ್ಷೆಯಲ್ಲಿ ಕಲ್ಪತರು ನಾಡು - ತುಮಕೂರು ಕೊರೊನಾ ಭೀತಿ

ಕಲ್ಪತರುನಾಡು ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 774 ಮಂದಿಯ ಗಂಟಲು ದ್ರವವನ್ನ ಕೊರೊನಾ ಪರೀಕ್ಷೆ ಕಳುಹಿಸಲಾಗಿದ್ದು, ಇಂದು ವರದಿ ಬರಬಹುದೆಂದು ನಿರೀಕ್ಷಿಸಲಾಗಿದೆ.

Tumkur in anticipation of 774 swab test report
774 ಮಂದಿಯ ಸ್ವಾಬ್ ಟೆಸ್ಟ್ ವರದಿಯ ನಿರೀಕ್ಷೆಯಲ್ಲಿ ಕಲ್ಪತರು ನಾಡು

By

Published : May 27, 2020, 9:10 AM IST

ತುಮಕೂರು:ಜಿಲ್ಲೆಯಲ್ಲಿ ಹೊಸದಾಗಿ 774 ಮಂದಿಯ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ವರದಿ ಬರುವ ನಿರೀಕ್ಷೆ ಇದೆ.

774 ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿಯ ನಿರೀಕ್ಷೆಯಲ್ಲಿ ಕಲ್ಪತರು ನಾಡು

ಸದ್ಯ, 2,082 ಮಂದಿಯನ್ನ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ಇದುವರೆಗೂ ಜಿಲ್ಲೆಯಾದ್ಯಂತ 8,900 ಜನರ ಸ್ಯಾಂಪಲ್​ಗಳನ್ನ ಪಡೆಯಲಾಗಿದೆ. ಅದರಲ್ಲಿ 8,040 ಮಂದಿಯ ವರದಿಗಳು ನೆಗೆಟಿವ್ ಬಂದಿವೆ. 59 ಜನರ ಸ್ಯಾಂಪಲ್ ವರದಿಯನ್ನ ತಿರಸ್ಕರಿಸಿ, ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 27 ಮಂದಿಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

13 ವರ್ಷದ ಬಾಲಕ ಸೇರಿ ಐವರು ಗುಣಮುಖರಾಗಿದ್ದು, 20 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಐದು ಪ್ರದೇಶಗಳನ್ನುಕಂಟೇನ್ಮೆಂಟ್​ ಝೋನ್​ಗಳೆಂದು ಎಂದು ಪರಿಗಣಿಸಿ, ಸೀಲ್​ಡೌನ್ ಮಾಡಲಾಗಿದೆ.

ABOUT THE AUTHOR

...view details