ಕರ್ನಾಟಕ

karnataka

ETV Bharat / state

ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂ. ಮೌಲ್ಯದ ಗೋಣಿ ಚೀಲಗಳು ಭಸ್ಮ - ಅಂತರನಹಳ್ಳಿಯ ಭವಾನಿ ರೈಸ್ ಇಂಡಸ್ಟ್ರೀಸ್

ಮಧ್ಯಾಹ್ನ ಸುಮಾರು 3.30 ರಿಂದ 4 ಗಂಟೆಯೊಳಗೆ ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ..

Tumkur Gunny bag damage from short circuit
ಶಾರ್ಟ್ ಸರ್ಕ್ಯೂಟ್ ನಿಂದ ಲಕ್ಷಾಂತರ ರೂ. ಮೌಲ್ಯದ ಗೋಣಿ ಚೀಲ ಭಸ್ಮ

By

Published : May 8, 2021, 8:20 PM IST

ತುಮಕೂರು :ಕಟ್ಟಡದ ಮೇಲೆ ಅಳವಡಿಸಿದ್ದ ಸೋಲಾರ್ ಪ್ಯಾನಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಗೋಣಿಚೀಲಗಳು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಹೊರವಲಯದ ಅಂತರನಹಳ್ಳಿಯ ಭವಾನಿ ರೈಸ್ ಇಂಡಸ್ಟ್ರೀಸ್ನಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಲಕ್ಷಾಂತರ ರೂ. ಮೌಲ್ಯದ ಗೋಣಿ ಚೀಲ ಭಸ್ಮ..

ಓದಿ: ಚಾಮರಾಜನಗರ ಸಾವು ಪ್ರಕರಣ : ನ್ಯಾಯಾಂಗ ತನಿಖೆ ಪ್ರಕ್ರಿಯೆ ಹಾಗೂ ಸವಾಲುಗಳು!

ಸುಮಾರು 50 ಸಾವಿರಕ್ಕೂ ಅಧಿಕ ಖಾಲಿ ಚೀಲಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಬಹುತೇಕ ಎಲ್ಲಾ ಗೋಣಿಚೀಲಗಳು ಸುಟ್ಟು ಹೋಗಿದ್ದವು.

ಮಧ್ಯಾಹ್ನ ಸುಮಾರು 3.30 ರಿಂದ 4 ಗಂಟೆಯೊಳಗೆ ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ABOUT THE AUTHOR

...view details