ತುಮಕೂರು:ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಹಲವು ರೀತಿಯ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಮೂಲಕ ಲಾಭದಾಯಕ ಕೃಷಿಯತ್ತ ಹೆಚ್ಚು ಆಸಕ್ತಿ ವಹಿಸಿದ್ದರು.
ಇದಕ್ಕೆ ಉದಾಹರಣೆ ಎಂಬಂತೆ ಮುಖ್ಯವಾಗಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಪದ್ಧತಿಯನ್ನು ತಿಳಿದುಕೊಳ್ಳಲು ಕೇಂದ್ರೀಯ ತೋಟಗಾರಿಕಾ ಪ್ರಯೋಗಿಕ ಕೇಂದ್ರಕ್ಕೆ ಎಡತಾಕಿರುವುದು ಬೆಳಕಿಗೆ ಬಂದಿದೆ.
ತುಮಕೂರಿನ ಹೊರವಲಯದ ಹಿರೇಹಳ್ಳಿಯಲ್ಲಿ ಇರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಲಾಕ್ಡೌನ್ ಸಂದರ್ಭದಲ್ಲಿ ಐಟಿ ಉದ್ಯಮಿಗಳು, ಹಣ್ಣು ಬೆಳೆಗಾರರು ರೈತರು ದೂರವಾಣಿ ಮೂಲಕ ಸಾಕಷ್ಟು ಮಾಹಿತಿಯನ್ನು. ಅದರಲ್ಲೂ ಮುಖ್ಯವಾಗಿ ಡ್ರ್ಯಾಗನ್ ಫ್ರೂಟ್ ಬೆಳೆ ಪದ್ಧತಿ ಕುರಿತು ಹೆಚ್ಚು ಆಸಕ್ತಿ ವಹಿಸಿರುವುದು ಗಮನಾರ್ಹ.
ಅಲ್ಲದೆ ತೋಟಗಾರಿಕಾ ಕೇಂದ್ರದ ವೆಬ್ಸೈಟ್ಗೆ ಹೆಚ್ಚು ಮಂದಿ ಭೇಟಿ ನೀಡಿ ಸರ್ಚ್ ಮಾಡಿರುವುದು ಕಂಡುಬಂದಿದೆ. ಇನ್ನು ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಡ್ರ್ಯಾಗನ್ ಫ್ರೂಟ್ ಬೆಳೆ ಪದ್ಧತಿಯ ವಿಡಿಯೋಗಳನ್ನು ಹೆಚ್ಚು ವೀಕ್ಷಿಸಿದ್ದಾರೆ. ಅಲ್ಲದೆ ಲಾಕ್ಡೌನ್ ಸಡಿಲಿಕೆ ನಂತರ ನೂರಾರು ಮಂದಿ ಐಟಿ ಉದ್ಯೋಗಿಗಳು ರೈತರ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.