ಕರ್ನಾಟಕ

karnataka

ETV Bharat / state

ಕಾಡಶೆಟ್ಟಿಹಳ್ಳಿಯಲ್ಲಿ ತುಮಕೂರು ಡಿಸಿ ವಾಸ್ತವ್ಯ - village stay programme in tumkur

ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ "ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ'' ಕಾರ್ಯಕ್ರಮದಡಿ ಗುಬ್ಬಿ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ವಾಸ್ತವ್ಯ ಹೂಡಿ ಜನರ ಕುಂದುಕೊರತೆಗಳನ್ನು ಆಲಿಸಿದರು.

Tumakuru
ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ

By

Published : Mar 21, 2021, 8:56 AM IST

ತುಮಕೂರು: "ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ" ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಗುಬ್ಬಿ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು.

ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕರಿಂದ ಬಂದಂತಹ 52 ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಯಿತು. ಮಾಸಾಶನಕ್ಕೆ ಸಂಬಂಧಿಸಿದ 7 ಅರ್ಜಿಗಳ ವಿಲೇವಾರಿ, 2 ಸಾಗುವಳಿ ಚೀಟಿ ವಿತರಣೆ, 9 ಪಹಣಿ ತಿದ್ದುಪಡಿ, ಏಳು ಪೌತಿ ಖಾತೆಗಳನ್ನು ಮಾಡಿಕೊಡಲಾಯಿತು. ದೃಷ್ಟಿ ದೋಷದಿಂದ ಬಳಲುತ್ತಿದ್ದ 45 ಜನರಿಗೆ ಕನ್ನಡಕ ವಿತರಿಸಲು ನಿರ್ಧರಿಸಲಾಯಿತು. ಗ್ರಾಮಕ್ಕೆ ಅಗತ್ಯವಿದ್ದ ಸ್ಮಶಾನದ ಜಾಗವನ್ನು ಗುರುತಿಸಿ ತೀರ್ಮಾನಿಸಲಾಯಿತು.

ಎಸ್ಪಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಇದನ್ನೂ ಓದಿ:ರಾಜಸ್ಥಾನದಲ್ಲಿ ಮಣ್ಣಿನ ದಿಬ್ಬ ಕುಸಿದು ಮೂರು ಮಕ್ಕಳು ಸಾವು

ABOUT THE AUTHOR

...view details