ತುಮಕೂರು: ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆ ಸಂಪೂರ್ಣ ಕಲುಷಿತಗೊಂಡಿದ್ದು, ಕೆರೆಯಲ್ಲಿರುವ ನೀರು ಗಬ್ಬುನಾರುತ್ತಿದೆ.
ಕೆರೆಯ ತುಂಬೆಲ್ಲ ಗಿಡಗಂಟಿಗಳು ಬೆಳೆದಿದ್ದರೂ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸುಮಾರು ಮೂರು ತಿಂಗಳ ಹಿಂದಷ್ಟೇ ಹೇಮಾವತಿ ಜಲಾಶಯದಿಂದ ಕೆರೆಗೆ ಅನೇಕ ವರ್ಷಗಳ ನಂತರ ನೀರು ಹರಿಸಲಾಗಿತ್ತು. ಇದರಿಂದ ಕೆರೆಯ ಚಿತ್ರಣವೇ ಬದಲಾಗಿತ್ತು. ಸಾರ್ವಜನಿಕರು ಕೂಡ ಕೆರೆ ಕಂಡು ಸಂತಸ ವ್ಯಕ್ತಪಡಿಸಿದ್ದರು. ಆದರೆ ಕೆರೆಗೆ ನೀರು ತುಂಬಿಸಿದ ನಂತರದ ದಿನಗಳಲ್ಲಿ ಅದರ ನಿರ್ವಹಣೆಯತ್ತ ಜಿಲ್ಲಾಡಳಿತವಾಗಲಿ, ತುಮಕೂರು ಮಹಾನಗರ ಪಾಲಿಕೆಯಾಗಲಿ ತಿರುಗಿಯೂ ನೋಡಿಲ್ಲ.
ಓದಿ: ಸ್ಲಂ ಜನರಿಗೆ ಉಚಿತ ನೀರು ಸರಬರಾಜು ಮಾಡುವಂತೆ ಒತ್ತಾಯ
ಹೀಗಾಗಿ ಕೆರೆಯ ತುಂಬೆಲ್ಲ ಗಿಡಗಂಟಿಗಳು ಬೆಳೆದು ನಿಂತಿದ್ದು, ಕೆರೆಯ ಸುತ್ತಮುತ್ತಲ ವಾತಾವರಣ ಅನೈರ್ಮಲ್ಯದಿಂದ ಕೂಡಿದೆ. ಇನ್ನು ಮುಂದಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕೆರೆಯ ಸಂರಕ್ಷಣೆಯತ್ತ ಗಮನಹರಿಸಬೇಕಿದೆ.