ಕರ್ನಾಟಕ

karnataka

ETV Bharat / state

211 ಮಂದಿಯಲ್ಲಿ ಸೋಂಕು ಪತ್ತೆ.. 236 ಮಂದಿ ಸಂಪೂರ್ಣ ಗುಣಮುಖ - 211 corona cases detected

ಈವರೆಗೂ 8528 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 2156 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆ

By

Published : Sep 20, 2020, 9:02 PM IST

ತುಮಕೂರು :ಜಿಲ್ಲೆಯಲ್ಲಿ ಇಂದು 211 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 10,932ಕ್ಕೆ ಏರಿಕೆಯಾಗಿದೆ.

ಇಂದು ತುಮಕೂರು ತಾಲೂಕಿನಲ್ಲಿ 71, ಪಾವಗಡ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 21, ಶಿರಾ 22, ಕುಣಿಗಲ್ 23, ಮಧುಗಿರಿ 16, ಕೊರಟಗೆರೆ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ತಲಾ 12, ತುರುವೇಕೆರೆ 8, ಗುಬ್ಬಿಯಲ್ಲಿ ಐವರಿಗೆ ಸೋಂಕು ತಗುಲಿದೆ.

ಇಂದು 236 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 8528 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 2156 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೃತರ ಸಂಖ್ಯೆ 206ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details