ತುಮಕೂರು: ಜಿಲ್ಲೆಯಲ್ಲಿ 109 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3420ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 165 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 2359 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 958 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರಲ್ಲಿ 165 ಮಂದಿ ಕೊರೊನಾದಿಂದ ಗುಣಮುಖ: ಇಬ್ಬರ ಸಾವು - 209 people infected with corona
ಕಲ್ಪತರುನಾಡಲ್ಲಿ ಇಂದು 109 ಮಂದಿಗೆ ಸೋಂಕು ಪತ್ತೆಯಾಗಿದೆ. ಒಂದೇ ದಿನ 165 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ತುಮಕೂರು
ಇಂದು ತುಮಕೂರು ತಾಲೂಕಿನಲ್ಲಿ 38 ಮಂದಿ ಸೋಂಕಿಗೆ ಒಳಗಾಗಿದ್ದು, ತುರುವೇಕೆರೆ 22, ತಿಪಟೂರು 13, ಕೊರಟಗೆರೆ ತಾಲೂಕಿನಲ್ಲಿ 10, ಶಿರಾ ತಾಲೂಕಿನಲ್ಲಿ 8, ಪಾವಗಡ ತಾಲೂಕಿನಲ್ಲಿ 7, ಗುಬ್ಬಿ ತಾಲೂಕಿನಲ್ಲಿ 6, ಕುಣಿಗಲ್ ತಾಲೂಕಿನಲ್ಲಿ 3, ಮಧುಗಿರಿ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.
ಇಂದು ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. 55,180 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪಡೆಯಲಾಗಿದ್ದು, ಅದರಲ್ಲಿ 47,945 ಮಂದಿಯಲ್ಲಿ ನೆಗೆಟಿವ್ ಬಂದಿದೆ.