ಕರ್ನಾಟಕ

karnataka

ETV Bharat / state

ತುಮಕೂರಲ್ಲಿ 1,982 ಮಂದಿ ಕ್ವಾರಂಟೈನ್​​

ತುಮಕೂರು ಜಿಲ್ಲೆಯಾದ್ಯಂತ ಕೊರೊನಾ ಪರೀಕ್ಷೆಗೆ 7877 ಜನರ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಅದ್ರಲ್ಲಿ 6858 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ. 966 ಮಂದಿಯ ಸ್ಯಾಂಪಲ್​​ಗಳ ವರದಿ ಇನ್ನೂ ಬರಬೇಕಿದೆ.

Tumkur: 1982 Quarantined in Tumkur
ತುಮಕೂರು: ಕಲ್ಪತರು ನಾಡಲ್ಲಿ 1982 ಮಂದಿ ಕ್ವಾರಂಟೈನ್

By

Published : May 21, 2020, 11:00 AM IST

ತುಮಕೂರು:ಕೋವಿಡ್-19 ಸೋಂಕು ಹರಡದಂತೆ ತಡೆಯಲು ಜಿಲ್ಲೆಯಲ್ಲಿ 1982 ಮಂದಿಯನ್ನು ಕ್ವಾರಂಟೈನ್​​ನಲ್ಲಿ ಇಡಲಾಗಿದೆ. ಅದರಲ್ಲಿ 840 ಮಂದಿಯನ್ನು ಶಂಕಿತರೆಂದು ಗುರುತಿಸಿ ಜಿಲ್ಲಾಸ್ಪತ್ರೆಯಲ್ಲಿ ಐಸೋಲೋಷನ್​ನಲ್ಲಿ ಇರಿಸಲಾಗಿದೆ.

ಇದುವರೆಗೂ ಜಿಲ್ಲೆಯಾದ್ಯಂತ ಕೊರೊನಾ ಪರೀಕ್ಷೆಗೆ 7877 ಜನರ ಸ್ಯಾಂಪಲ್​​ಗಳನ್ನು ಪಡೆಯಲಾಗಿದೆ. ಅದ್ರಲ್ಲಿ 6858 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ. 966 ಮಂದಿಯ ಸ್ಯಾಂಪಲ್​​ಗಳ ವರದಿ ಇನ್ನೂ ಬರಬೇಕಿದೆ. ಜೊತೆಗೆ ಒಟ್ಟು 77 ಮಂದಿ ಶಂಕಿತರು ಜೆಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ 38 ಜನರ ಸ್ಯಾಂಪಲ್ ತಿರಸ್ಕೃತವಾಗಿದ್ದು, ಪುನಃ ಸ್ಯಾಂಪಲ್​ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 15 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢವಾಗಿದೆ. ಇಬ್ಬರು ಮೃತಪಟ್ಟಿದ್ದು, ಐವರು ಗುಣಮುಖರಾಗಿದ್ದಾರೆ. ಹಾಗೇ ಎಂಟು ಮಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details