ತುಮಕೂರು:ತಿಪಟೂರಿನ ಗೋವಿಂದಯ್ಯ ಎಂಬುವರು 4 ಎಕರೆ ಜಮೀನಿಗೆ ಕೃಷಿ ಇಲಾಖೆಯಿಂದ ಹಾಗೂ ತೋಟಗಾರಿಕೆ ಇಲಾಖೆಯಿಂದ ಒಂದೇ ಸರ್ವೇ ನಂಬರ್ ಗೆ, ಒಂದೇ ತಿಂಗಳಿನಲ್ಲಿ 3 ಬಾರಿ ಸಾಲ ಪಡೆದುಕೊಂಡಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಹೆಚ್.ಹುಚ್ಚಯ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ನ ಸದಸ್ಯ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಗೋವಿಂದಯ್ಯ ಎಂಬುವವರು ನಾಲ್ಕು ಎಕರೆ ಜಮೀನಿಗೆ ಕೃಷಿ ಇಲಾಖೆಯಿಂದ ಹಾಗೂ ತೋಟಗಾರಿಕೆ ಇಲಾಖೆಯಿಂದ ಒಂದೇ ಸರ್ವೆ ನಂಬರ್ ಗೆ ಒಂದೇ ತಿಂಗಳಿನಲ್ಲಿ ಮೂರು ಬಾರಿ ಸಾಲ ತೆಗೆದುಕೊಂಡಿರುತ್ತಾರೆ, ಸಾಮಾನ್ಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ, ಆದರೆ ಇಲ್ಲಿಯವರೆಗೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇಂತಹ ಅಧಿಕಾರಿಗಳಿಗೆ ನಾಚಿಕೆಯಾಗಬೇಕು, ಇನ್ನು ಅನುಪಾಲನ ವರದಿಗೆ ಹಾರಿಕೆಯ ಉತ್ತರ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ವೈ.ಹೆಚ್ ಹುಚ್ಚಯ್ಯ ಪ್ರಶ್ನಿಸಿದರು.