ಕರ್ನಾಟಕ

karnataka

ETV Bharat / state

ತುಮಕೂರು ಜಿಲ್ಲಾಸ್ಪತ್ರೆಗೆ ಡಿಸಿ ವೈ ಎಸ್ ಪಾಟೀಲ್ ಭೇಟಿ, ವೈದ್ಯರ ಜತೆಗೆ ಸಭೆ - ತುಮಕೂರು ಜಿಲ್ಲಾಸ್ಪತ್ರೆ

ಆರ್‌ಟಿಪಿಸಿಆರ್‌ ಲ್ಯಾಬ್‍ಗಳನ್ನು ಉನ್ನತೀಕರಿಸಿ ಟೆಸ್ಟ್ ಸ್ಯಾಂಪಲ್‌ಗಳನ್ನ ಹೆಚ್ಚಿಸಬೇಕು. ಇದಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಿಕೊಳ್ಳಿ ಎಂದು ಅವರು ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಶೇ. 20ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳನ್ನು ಖಾಯಂ ಆಗಿ ಮೀಸಲಿಡಲು ಕ್ರಮವಹಿಸಿ..

DC visit
DC visit

By

Published : Apr 17, 2021, 3:56 PM IST

ತುಮಕೂರು: ಕೊವೀಡ್-19ರ 2ನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಕೋವಿಡ್ ಟೆಸ್ಟ್, ವ್ಯಾಕ್ಸೀನೇಷನ್‌ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾದ ಕೂಡಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು. ಇದರಿಂದ ಸೋಂಕಿತರ ಆರೋಗ್ಯ ಸ್ಥಿತಿ ಹಾಗೂ ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.

ಟ್ರೈಯೆಜ್ ಅಡಿಯಲ್ಲಿ ರೋಗಿಗಳು ಬಯಸಿದರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಬೆಡ್, ಐಸಿಯು ಸಿಗದೇ ಇರುವ ಸಂದರ್ಭದಲ್ಲಿ ಕೋವಿಡ್ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು, ರೋಗಿಯ ಆರೋಗ್ಯ ಸ್ಥಿತಿ ತಿಳಿಯಲು ಅನುಕೂಲವಾಗುವುದು.

ಆದ್ದರಿಂದ ಇದನ್ನು ಇಂದಿನಿಂದಲೇ ಜಾರಿಗೆ ತರುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರತಿದಿನ 4000 ಕೋವಿಡ್ ಸ್ಯಾಂಪಲ್ ಟೆಸ್ಟ್ ನಡೆಸಬೇಕು. ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು.

ಆರ್‌ಟಿಪಿಸಿಆರ್‌ ಲ್ಯಾಬ್‍ಗಳನ್ನು ಉನ್ನತೀಕರಿಸಿ ಟೆಸ್ಟ್ ಸ್ಯಾಂಪಲ್‌ಗಳನ್ನ ಹೆಚ್ಚಿಸಬೇಕು. ಇದಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಿಕೊಳ್ಳಿ ಎಂದು ಅವರು ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಶೇ. 20ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳನ್ನು ಖಾಯಂ ಆಗಿ ಮೀಸಲಿಡಲು ಕ್ರಮವಹಿಸಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜಿಲ್ಲಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 200 ಹಾಸಿಗೆಗಳಿವೆ. ಈಗಾಗಲೇ 115 ರೋಗಿಗಳು ದಾಖಲಾಗಿದ್ದಾರೆ. 85 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿರಿಸಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲೂ ಹಾಸಿಗೆ ಮೀಸಲಿಡುವ ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು, ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ, ಐಸಿಯು ಸಮಸ್ಯೆ ಎದುರಾದರೆ ಎಬಿಆರ್‌ಕೆ ಕಾರ್ಯಕ್ರಮದಡಿ ನೋಂದಾಯಿಸಿ ಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲು ಶಿಫಾರಸು ಮಾಡಬೇಕು.

ಸರ್ಕಾರದ ಆದೇಶದನ್ವಯ ಕೋವಿಡ್ ರೋಗಿಗಳಿಗೆ ಶೇಕಡಾವಾರು ಹಾಸಿಗೆಗಳನ್ನು ಮೀಸಲಿಡಬೇಕು ಮತ್ತು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು ಅನಿವಾರ್ಯ ಬಿದ್ದಲ್ಲಿ ಇದನ್ನ ಬಳಸಿಕೊಳ್ಳಬೇಕು. ಇದರಿಂದ ಜಿಲ್ಲಾಸ್ಪತ್ರೆಗೆ ಹೊರೆ ಕಡಿಮೆಯಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಿಇಒ ವಿದ್ಯಾಕುಮಾರಿ ಕೆ, ತುಮಕೂರು ಉಪವಿಭಾಗಧಿಕಾರಿ ಅಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುರೇಶ್ ಬಾಬು, ಆರ್‌ಎಂಒ ಡಾ. ವೀಣಾ, ಡಾ. ಕೇಶವರಾಜ್, ಡಾ. ಸನತ್ ಕುಮಾರ್, ಡಾ. ಭಾನುಪ್ರಕಾಶ್ ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ABOUT THE AUTHOR

...view details