ತುಮಕೂರು:ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಕೆಲ ವ್ಯಕ್ತಿಗಳಿಂದ ತೊಂದರೆಯಾಗಿತ್ತು, ಈಗ ಎಲ್ಲವೂ ಬದಲಾಗಿದೆ. ನಮ್ಮ ನಾಯಕರನ್ನು ಕರೆಸಿ ಸಭೆ ನಡೆಸುವ ಮೂಲಕ ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ. ಬೋರೇಗೌಡ ತಿಳಿಸಿದರು.
ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಯಾವುದೇ ತಕರಾರಿಲ್ಲ: ಕೆ.ಬಿ.ಬೋರೇಗೌಡ - ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಕೆಲ ವ್ಯಕ್ತಿಗಳಿಂದ ತೊಂದರೆಯಾಗಿತ್ತು
ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಕೆಲ ವ್ಯಕ್ತಿಗಳಿಂದ ತೊಂದರೆಯಾಗಿತ್ತು, ಈಗ ಎಲ್ಲವೂ ಸರಿಹೋಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ. ಬೋರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನ ಪ್ರಕಾರವಾಗಿ ಚುನಾವಣೆ ನಡೆದು ಅಧ್ಯಕ್ಷ,ಉಪಾಧ್ಯಕ್ಷ ಹಾಗು ಕಾರ್ಯದರ್ಶಿ ಸ್ಥಾನವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಬ್ಯಾಂಕ್ ವ್ಯವಹಾರಗಳನ್ನು ಸಂಘದ ಕಾರ್ಯದರ್ಶಿ ಮುರುಗಪ್ಪ ಗೌಡ ಅವರ ಜೊತೆಯಲ್ಲಿ ಸಂಘದ ಅಧ್ಯಕ್ಷರಾದ ಕೆ.ಬಿ. ಬೋರೇಗೌಡರೊಂದಿಗೆ ವ್ಯವಹಾರ ನಡೆಸಬಹುದೆಂದು ಆದೇಶವಾಗಿದೆ ಎಂದರು.
ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಹಾಸ್ಟೆಲ್ ಉತ್ತಮವಾಗಿ ನಡೆಯುತ್ತಿದೆ. ಮುಂದೆಯೂ ಅದೇ ರೀತಿ ಸುಸೂತ್ರವಾಗಿ ನಡೆಯಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಘದ ಪ್ರಮುಖ ನಾಯಕರನ್ನು ಕರೆಸಿ ಸಭೆ ನಡೆಸುವ ಮೂಲಕ ಸಲಹೆಗಳನ್ನು ಪಡೆದುಕೊಂಡು ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.