ಕರ್ನಾಟಕ

karnataka

ETV Bharat / state

ತುಮಕೂರು : ಗ್ರಾಪಂ ಸದಸ್ಯನ ಮೇಲೆ ಹಲ್ಲೆ ನಡೆಸಿದ ಮಂಗಳಮುಖಿಯರು! - ಮಧುಗಿರಿ ಗ್ರಾಮ ಪಂಚಾಯಿತಿ

ಹಣ ನೀಡದ ವ್ಯಕ್ತಿಯನ್ನು ಸುತ್ತುವರಿದು ಬೆದರಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಗ್ರಾಪಂ ಸದಸ್ಯ ರಂಗನಾಥ್, ಇದನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಮಂಗಳಮುಖಿಯರು ರಂಗನಾಥ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ..

tumkur
ಗ್ರಾ.ಪಂ. ಸದಸ್ಯನ ಮೇಲೆ ಹಲ್ಲೆ

By

Published : Jul 2, 2021, 12:35 PM IST

Updated : Jul 2, 2021, 1:29 PM IST

ತುಮಕೂರು :ಹಣ ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಥಳಿಸುತ್ತಿದ್ದಾಗ ಅದನ್ನು ತಡೆಯಲು ಯತ್ನಿಸಿದ ಗ್ರಾಪಂ ಸದಸ್ಯ‌ರೊಬ್ಬರ ಮೇಲೆಯೇ ಮಂಗಳಮುಖಿಯರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಧುಗಿರಿಯಲ್ಲಿ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಕೋಡ್ಲಾಪುರ ಗ್ರಾಮ ಪಂಚಾಯತ್ ಸದಸ್ಯ ರಂಗನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಪಂ ಸದಸ್ಯನ ಮೇಲೆ ಹಲ್ಲೆ

ಮಧುಗಿರಿ ಹೊರವಲಯದ ಹಿಂದೂಪುರ ಬೈಪಾಸ್​ನಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಇಬ್ಬರು ಮಂಗಳಮುಖಿಯರು ಹಣ ಕೇಳಿದ್ದರು. ಹಣ ನೀಡದ ವ್ಯಕ್ತಿಯನ್ನು ಸುತ್ತುವರಿದು ಬೆದರಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಗ್ರಾಪಂ ಸದಸ್ಯ ರಂಗನಾಥ್, ಇದನ್ನು ತಡೆಯಲು ಯತ್ನಿಸಿದ್ದಾರೆ.

ಆದರೆ, ಮಂಗಳಮುಖಿಯರು ರಂಗನಾಥ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು, ಜನರು ಸ್ಥಳಕ್ಕೆ ಬರುತ್ತಿದ್ದಂತೆ ಮಂಗಳಮುಖಿಯರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 2, 2021, 1:29 PM IST

ABOUT THE AUTHOR

...view details