ಪಾವಗಡ/ತುಮಕೂರು :ತಾಲೂಕಿನ ಚಿತ್ಕಗಾನಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದ ಸಿಡಿಲು ಬಡಿದು ವೃದ್ಧನೋರ್ವ ಸಾವನ್ನಪ್ಪಿದ್ದಾನೆ.
ಪಾವಗಡದಲ್ಲಿ ಸಿಡಿಲು ಬಡಿದು ವೃದ್ಧ ಸಾವು.. - ಧಾರಾಕಾರ ಮಳೆ
ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಕಂದಾಯ ಅಧಿಕಾರಿ ಗಿರೀಶ್ ಮತ್ತು ರಾಜ್‌ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೃದ್ಧ ಸಾವು
ಹನುಮಂತರಾಯಪ್ಪ (69) ಸಿಡಿಲಿಗೆ ಬಲಿಯಾದ ವೃದ್ಧ. ಈತ ಧಾರಾಕಾರ ಮಳೆಯಾಗುತ್ತಿದ್ದ ಕಾರಣ ತಮ್ಮ ಜಮೀನಿನಲ್ಲಿದ್ದ ಹುಣಸೆ ಮರದ ಕೆಳಗೆ ನಿಂತಿದ್ದ ವೇಳೆ ಸಿಡಲು ಬಡಿದು ಮೃತಪಟ್ಟಿರುವುದಾಗಿ ವೃದ್ಧನ ಸೊಸೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಕಂದಾಯ ಅಧಿಕಾರಿ ಗಿರೀಶ್ ಮತ್ತು ರಾಜ್‌ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.