ಕರ್ನಾಟಕ

karnataka

ETV Bharat / state

ದೇವರ ಒಡವೆ ಮುಟ್ಟದೆ ಕೇವಲ ಹುಂಡಿಯಲ್ಲಿದ್ದ ಹಣ ಕಳುವು ಮಾಡುತ್ತಿದ್ದ ಮೂವರ ಬಂಧನ - ತುಮಕೂರು ಮೂವರು ಕಳ್ಳರ ಬಂಧನ

ದೇವರ ಯಾವುದೇ ಒಡವೆಗಳನ್ನು ಕಳ್ಳತನ ಮಾಡದೆ ಕೇವಲ ದೇವಸ್ಥಾನದ ಹುಂಡಿ ಮಾತ್ರ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

arrest
ಮೂವರ ಬಂಧನ

By

Published : Nov 5, 2022, 1:15 PM IST

ತುಮಕೂರು: ದೇವರ ಒಡವೆಗಳನ್ನು ಮುಟ್ಟದೆ ಕೇವಲ ಹುಂಡಿಯಲ್ಲಿದ್ದ ಹಣವನ್ನು ಮಾತ್ರ ಕಳುವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹೆಬ್ಬೂರು ಪೊಲೀಸರು ಬಂಧಿಸಿದ್ದಾರೆ. ಹಾಸನದ ಮುಬಾರಕ್ ಪಾಷಾ, ತುಮಕೂರಿನ ಮಹಮ್ಮದ್ ರಿಜ್ವಾನ್, ಮಹಮ್ಮದ್ ಸದ್ದಾಂ ಬಂಧಿತ ಆರೋಪಿಗಳು.

ಇವರು ಗ್ರಾಮದೇವತೆ ದೇವಸ್ಥಾನದ ಹುಂಡಿ ಕಳವು ಮಾಡಿಕೊಂಡು ಚೋಳಂಬಳ್ಳಿಗೆ ಹೋಗುತ್ತಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಬೈಕ್​ನಲ್ಲಿ ತೆರಳುತ್ತಿರುವುದನ್ನು ಗಮನಿಸಿದ ಹೆಬ್ಬೂರು ಪೊಲೀಸ್ ಸಿಬ್ಬಂದಿ, ಆರೋಪಿಗಳನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

ಕುಣಿಗಲ್, ಕುದೂರು, ಶಿವಗಂಗೆ ಹಾಗೂ ತುಮಕೂರು ಗ್ರಾಮಾಂತರ ಸೇರಿದಂತೆ ಸುಮಾರು 8 ಕಡೆ ದೇವಸ್ಥಾನದ ಹುಂಡಿ ಕಳವು ಮಾಡಿರುವುದಾಗಿ ಖದೀಮರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಹೆಬ್ಬೂರು ಹೋಬಳಿಯ ಗ್ರಾಮವೊಂದರಲ್ಲಿ ಪಲ್ಸರ್ ಬೈಕ್​ ಹಾಗೂ ಎಫ್​ಝಡ್ ಬೈಕ್ ಕಳವು ಮಾಡಿ ಬಳಿಕ ದೇವಸ್ಥಾನದ ಹುಂಡಿ ಕಳವಿನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಶೋಕಿ ಜೀವನಕ್ಕಾಗಿ ಬೈಕ್, ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಆರೋಪಿಗಳಿಂದ ಐವತ್ತು ಸಾವಿರ ನಗದು ಹಾಗೂ 2 ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ದೇವಸ್ಥಾನದ ಹುಂಡಿ ಮಾತ್ರ ಕಳವು ಮಾಡಿದ ಆರೋಪಿಗಳು, ದೇವರ ಯಾವುದೇ ಒಡವೆಗಳನ್ನು ಕಳ್ಳತನ ಮಾಡುತ್ತಿರಲಿಲ್ಲ. ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details