ಕರ್ನಾಟಕ

karnataka

ETV Bharat / state

ಬರೋಬ್ಬರಿ 33.50 ಲಕ್ಷ ರೂ.ಗೆ ಹರಾಜಾದ ಗ್ರಾಪಂ​ ಸದಸ್ಯ ಸ್ಥಾನ; ಬಿಡ್​ ವಿಡಿಯೋ ವೈರಲ್​ - Panchayat Membership Auction In Tumakuru

ಗ್ರಾಮ ಪಂಚಾಯತ್ ಚುನಾವಣೆ ತಯಾರಿಯ ನಡುವೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನ ಮಾಡುವಂತ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಹತ್ತಾರು ಕಾಯ್ದೆ ಹಾಗೂ ಕಾನೂನುಗಳ ಹೊರತಾಗಿಯೂ ಗ್ರಾಮ ಪಂಚಾಯತ್​ ಸದಸ್ಯತ್ವವನ್ನು ಹರಾಜು ಹಾಕುವ ಮೂಲಕ ತಮ್ಮ ಅಜ್ಞಾನವನ್ನು ಮುಂದುವರೆಸಿದ್ದಾರೆ. ಹಾರಜು ಮಾಡಿರುವ ವಿಡಿಯೋ ವೈರಲ್​ ಆಗಿದೆ.

Three Gram Pnchayath Member Post Auctioned In Tumakuru
ಸಂಗ್ರಹ ಚಿತ್ರ

By

Published : Dec 18, 2020, 3:25 PM IST

ತುಮಕೂರು:ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್​ ಸದಸ್ಯತ್ವ ಹರಾಜು ಪ್ರಕ್ರಿಯೆಗಳು ಭರ್ಜರಿಯಾಗಿ ನಡೆದಿವೆ. ತುರುವೇಕೆರೆ ತಾಲೂಕಿನ ಕಣತೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯ ಸ್ಥಾನಗಳನ್ನು ಬರೋಬ್ಬರಿ 33.50 ಲಕ್ಷ ರೂ.ಗೆ ಹರಾಜು ಹಾಕಲಾಗಿದೆ.

ಕೆ.ಮಾವಿನಹಳ್ಳಿ, ಮುದ್ದನಹಳ್ಳಿ, ಕಣತೂರು ವಾರ್ಡ್​ಗಳ ಸದಸ್ಯತ್ವ ಮಾರಾಟ ಮಾಡಲಾಗಿದೆ. ಈ ಕುರಿತ ವಿಡಿಯೋ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ : ಜೈಲಿನಿಂದಲೇ ಗ್ರಾ.ಪಂಚಾಯತ್​ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೋಪಣ್ಣ

ಮೂರು ವಾರ್ಡ್​ಗಳ ಸದಸ್ಯತ್ವವನ್ನು 33.50 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಗ್ರಾಮದ ಕೆಂಪಮ್ಮ ದೇವಿ ದೇವಸ್ಥಾನದಲ್ಲಿ ಹರಾಜು ಹಾಕಲಾಗಿದೆ. ಲಕ್ಷ್ಮಣಗೌಡ ಎಂಬಾತ ಹರಾಜು ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ABOUT THE AUTHOR

...view details