ತುಮಕೂರು : ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಕಾರು ನಡುವೆ ನಡೆದ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಘಟನೆ ಸಂಭವಿಸಿತು. ಮೃತರನ್ನು 20 ವರ್ಷದ ಆಕಾಶ್, 28 ವರ್ಷದ ಹೇಮಂತ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಪಾವಗಡ ಕಡೆಗೆ ಬರುತ್ತಿದ್ದ ಕಾರು, ಪಾವಗಡದಿಂದ ತುಮಕೂರಿನ ಕಡೆಗೆ ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಪಾವಗಡ ಮೂಲದವರು ಎಂದು ತಿಳಿದುಬಂದಿದೆ. ದುರಂತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಾಳು ಉಜ್ವಲ್ ಕೃಷ್ಣರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿಯೇ ಇರುವ ಟ್ರಾಮಾ ಸೆಂಟರ್ನಲ್ಲಿ ದಾಖಲು ಮಾಡಲಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮುಂಜಾನೆ ನಿದ್ರೆಯ ಮಂಪರಿನಲ್ಲಿದ್ದ ಲಾರಿ ಚಾಲಕ ಕಾರ್ಗೆ ಡಿಕ್ಕಿ ಹೊಡೆದಿರುವ ಸಂಭವವಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಾರಿಗೆ ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ಉಳಿದವು 40 ಬಡ ಜೀವಗಳು!
ಆನಂದ್ ಮಹೀಂದ್ರಾ ಸೇರಿ 13 ಜನರ ವಿರುದ್ಧ ಕೇಸ್: ಕಾರಿನಲ್ಲಿ ಜೀವ ರಕ್ಷಣಾ ಕವಚಗಳನ್ನು ಅಳವಡಿಸಲಾಗಿರುತ್ತದೆ. ಅದರಲ್ಲಿ ಏರ್ಬ್ಯಾಗ್ ಕೂಡ ಒಂದು. ಉತ್ತರಪ್ರದೇಶದ ಕಾನ್ಪುರದಲ್ಲಿ ವೈದ್ಯರ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಆದ್ರೆ ಆ ಸಮಯದಲ್ಲಿ ಏರ್ಬ್ಯಾಗ್ ಮಾತ್ರ ತೆರೆದುಕೊಂಡಿಲ್ಲ. ಇದರಿಂದಾಗಿ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿ ಮಹೀಂದ್ರಾ ಸಂಸ್ಥೆಯ ವಿರುದ್ಧ ಕೇಸ್ ಹಾಕಲಾಗಿದೆ. ಘಟನೆಯನ್ನು ಮಹೀಂದ್ರಾ ಗ್ರೂಪ್ ಮೊದಲು ನಿರ್ಲಕ್ಷಿಸಿತ್ತು. ಇದರ ವಿರುದ್ಧ ಕೋರ್ಟ್ ಮೊರೆ ಹೋದ ಬಳಿಕ ಪೊಲೀಸರು ಗ್ರೂಪ್ ಅಧ್ಯಕ್ಷರು ಸೇರಿದಂತೆ 13 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಕಾರಿನ ದೋಷದಿಂದಾಗಿ ಸಾವು:ಅಪಘಾತದಲ್ಲಿ ಡಾ.ಅಪೂರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಂದೆ ರಾಜೇಶ್ ಮಿಶ್ರಾ ಅವರು ಪೊಲೀಸರ ನೆರವಿನೊಂದಿಗೆ ಕಾರಿನ ಸ್ಥಿತಿಯನ್ನು ಪರಿಶೀಲಿಸಿದಾಗ ಕಾರಿನಲ್ಲೇ ದೋಷ ಕಂಡುಬಂದಿತ್ತು. ಇದನ್ನೇ ಕಾರಣದಿಂದ ಮಿಶ್ರಾ ಅವರು ಏರ್ ಬ್ಯಾಗ್ ತೆರೆಯದ ಕಾರಣ ಮಗ ಸಾವನ್ನಪ್ಪಿದ್ದಾನೆ ಎಂದು ದೂರಿದ್ದರು. ಘಟನೆಯ ಬಗ್ಗೆ ಮಹೀಂದ್ರಾ ಗ್ರೂಪ್‌ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ನೆರವಿಗೆ ಬರುವ ಬದಲು ದೂರು ನಿರ್ಲಕ್ಷಿಸಿದ್ದರು. ಇದರ ವಿರುದ್ಧ ರಾಜೇಶ್ ಮಿಶ್ರಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸಿ, ಕಾರಿನ ಸಂಸ್ಥೆಯ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿತ್ತು. ಕೋರ್ಟ್ ಆದೇಶದ ಮೇರೆಗೆ ರಾಯಪುರ ಪೊಲೀಸ್ ಠಾಣೆಯಲ್ಲಿ ಮಹೀಂದ್ರಾ ಗ್ರೂಪ್‌ನ 13 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.