ತುಮಕೂರು:ಕೆರೆಯಲ್ಲಿ ಮೇಕೆಗಳಿಗೆ ನೀರು ಕುಡಿಸಲು ತೆರಳಿದ್ದ ವೇಳೆ ಒಂದೇ ಕುಟುಂಬದ ಮೂವರು ಮಕ್ಕಳು ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ದೇವರಾಯನ ರೊಪ್ಪ ಗ್ರಾಮದಲ್ಲಿ ನಡೆದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮೃತರನ್ನು ಶರೀಫ್ (10), ಚಾಂದಬಿ (14) ಹಾಗೂ ಬಾಂದಬಿ (13) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರೊಪ್ಪ ಗ್ರಾಮದ ಬಾಷಾ ಸಾಬ್ ಎಂಬುವರ ಮಕ್ಕಳಾಗಿದ್ದಾರೆ.
ಕಾಲು ಜಾರಿ ಬಿದ್ದ ಒಬ್ಬರನ್ನು ಮತ್ತೊಬ್ಬರು ರಕ್ಷಿಸಲು ಯತ್ನಿಸಿ ಎಲ್ಲ ಮೂವರೂ ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ. ಕೆರೆಯಿಂದ ಮೇಲೆತ್ತಿದ್ದ ಮಕ್ಕಳ ಮೃತದೇಹ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾರವಾರ: ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಆತ್ಮಹತ್ಯೆಗೆ ಶರಣಾದ ಪತಿ!