ಕರ್ನಾಟಕ

karnataka

ETV Bharat / state

ದೇಗುಲದ ಹುಂಡಿ ದೋಚುತ್ತಿದ್ದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು.. - ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಕಳ್ಳತನ

ದೇಗುಲದ ಹುಂಡಿ ಒಡೆಯುತ್ತಿದ್ದ ನಾಲ್ವರು ಚೋರರ ಪೈಕಿ ಓರ್ವನನ್ನು ಸೆರೆಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟಣ್ಣ ಸೆರೆ ಸಿಕ್ಕ ಕಳ್ಳ

thief-stolen-money-from-batarayaswamy-temple-in-tumkur
ದೇಗುಲದ ಹುಂಡಿ ದೋಚುತ್ತಿದ್ದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

By

Published : Jan 12, 2020, 12:30 PM IST

ತುಮಕೂರು:ದೇಗುಲದ ಹುಂಡಿ ಒಡೆಯುತ್ತಿದ್ದ ನಾಲ್ವರು ಚೋರರ ಪೈಕಿ ಓರ್ವನನ್ನು ಸೆರೆಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಬಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೇಗುಲದ ಹುಂಡಿ ದೋಚುತ್ತಿದ್ದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು......

ನಿನ್ನೆ ರಾತ್ರಿ ಬಾಗೇನಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ನಾಲ್ವರು ಚೋರರು ಹುಂಡಿ ಒಡೆಯಲು ಪ್ರಯತ್ನಿಸಿದ್ದು, ಈ ವಿಷಯ ತಿಳಿದು ಎಚ್ಚರಗೊಂಡ ಗ್ರಾಮಸ್ಥರು ನಾಲ್ವರ ಪೈಕಿ ಓರ್ವನನ್ನು ಸೆರೆಹಿಡಿದಿದ್ದಾರೆ. ನಂತರ ಜನರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಕಳ್ಳನ ಕಾಲು ಮುರಿದು ಹೋಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಕಳ್ಳನು ಹೈದರಾಬಾದ್ ಮೂಲದವನೆಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details