ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿ ಮತ ಕೇಳುವ ಅಗತ್ಯವೇ ಇರಲಿಲ್ಲ ಬದಲಾಗಿ ನಮ್ಮ ಬಳಿ ನಂಬರ್ ಒನ್ ಕಮಾಡಿಟಿ ಮೋದಿ ಅವರಿದ್ದರು ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಎರಡನೇ ಮದುವೆ ಕುರಿತು ಮಾತನಾಡಲು ಪ್ರಚೋದಿಸಿದ್ದೇ ಸಿಎಂ ಹೇಳಿಕೆ: ಜೆ. ಸಿ. ಮಾದುಸ್ವಾಮಿ - undefined
ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿ ಮತ ಕೇಳುವ ಅಗತ್ಯವೇ ಇರಲಿಲ್ಲ ಬದಲಾಗಿ ನಮ್ಮ ಬಳಿ ನಂಬರ್ ಒನ್ ಕಮಾಡಿಟಿ ಮೋದಿ ಅವರಿದ್ದರು ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಶಾಸಕ ಜೆ. ಸಿ. ಮಾಧುಸ್ವಾಮಿ
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಪ್ರಚಾರಕ್ಕೆ ಚಿಕ್ಕನಾಯಕನ ಹಳ್ಳಿಗೆ ಬಂದ ಸಂದರ್ಭದಲ್ಲಿ ಏಕವಚನದಲ್ಲಿ ನನ್ನ ಬಗ್ಗೆ ಟೀಕೆ ಮಾಡಿದ್ರು, ಅದನ್ನು ತಡೆದುಕೊಳ್ಳುವಂತಹ ತಾಳ್ಮೆ ನನಗೆ ಇರಲಿಲ್ಲ.
ಶಾಸಕ ಜೆ. ಸಿ. ಮಾಧುಸ್ವಾಮಿ
ಅಲ್ಲದೆ ನಾನು ಎಂದಿಗೂ ಮುಖ್ಯಮಂತ್ರಿ ಅವರಿಗೆ ಏಕವಚನದಲ್ಲಿ ಮಾತನಾಡಿಲ್ಲ. ಕಾನೂನಿನ ಪ್ರಕಾರ ನೀವು ಹೇಗೆ ಎರಡನೇ ಮದುವೆ ಆದ್ರಿ ಎಂದು ನಾನು ಕೇಳಿದ್ದೇನೆ. ಈ ರೀತಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿಸಿದವರು ಮುಖ್ಯಮಂತ್ರಿ ಕುಮಾರಸ್ವಾಮಿ. ಆದರೆ ಅವರ ಬಗ್ಗೆ ವೈಯಕ್ತಿಕ ವಿಚಾರಗಳ ಬಗ್ಗೆ ಚುನಾವಣಾ ಪ್ರಚಾರ ಭಾಷಣದಲ್ಲಿ ನಾನು ಕ್ಷಮೆಯಾಚಿಸಿದ್ದೇನೆ ಎಂದರು.