ತುಮಕೂರು :ಒಎಲ್ಎಕ್ಸ್ನಲ್ಲಿ ಮಾರಾಟಕ್ಕೆ ಇರಿಸಿದ್ದ ಬೈಕ್ಗಳನ್ನು ಖರೀದಿಸುವ ನೆಪದಲ್ಲಿ ಮಾಲೀಕರ ಬಳಿ ಹೋಗಿ ಟೆಸ್ಟ್ಡ್ರೈವ್ ಮಾಡುತ್ತೇನೆಂದು ಪಡೆದು ಕದ್ದೊಯ್ದಿದ್ದ ಕಳ್ಳನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
Olxನಲ್ಲಿ ಮೋಸ ಮಾಡಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದವನ ಬಂಧನ - Tumakuru
ಈತನಿಂದ ಮೇಲುಕೊಟೆಯಲ್ಲಿ ಕಳ್ಳತನವಾಗಿದ್ದ ಬಜಾಜ್ ಡಿಸ್ಕವರ್, ಶ್ರೀರಂಗಪಟ್ಟಣದ ಬಜಾಜ್-15, ಗುಬ್ಬಿ ಪಟ್ಟಣದ ಬಜಾಜ್ ಪಲ್ಸರ್, ತುಮಕೂರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಟಿಎಂ ಬೈಕ್‌ನ ವಶಕ್ಕೆ ಪಡೆಯಲಾಗಿದೆ..
ತುಮಕೂರಿನ ರಾಜೀವ್ ಗಾಂಧಿ ಬಡಾವಣೆಯ ನೌಷದ್ ಪಾಷಾ ಬಂಧಿತ ಆರೋಪಿ. ಈತ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಒಎಲ್ಎಕ್ಸ್ನಲ್ಲಿ ದ್ವಿಚಕ್ರ ವಾಹನಗಳು ಮಾರಾಟಕ್ಕಿವೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಾಲೀಕರ ಬಳಿ ತೆರಳಿ ಬೈಕ್ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈತನಿಂದ ಮೇಲುಕೊಟೆಯಲ್ಲಿ ಕಳ್ಳತನವಾಗಿದ್ದ ಬಜಾಜ್ ಡಿಸ್ಕವರ್, ಶ್ರೀರಂಗಪಟ್ಟಣದ ಬಜಾಜ್-15, ಗುಬ್ಬಿ ಪಟ್ಟಣದ ಬಜಾಜ್ ಪಲ್ಸರ್, ತುಮಕೂರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಟಿಎಂ ಬೈಕ್‌ನ ವಶಕ್ಕೆ ಪಡೆಯಲಾಗಿದೆ. ಒಟ್ಟು ಬೈಕ್ಗಳ ಮೌಲ್ಯ ₹2,90,000 ಎಂದು ಪೊಲೀಸರು ತಿಳಿಸಿದ್ದಾರೆ.