ಕರ್ನಾಟಕ

karnataka

ETV Bharat / state

ಭಿಕ್ಷೆ ಕೇಳೋಕೆ ಬಂದಾಗ ಹುಷಾರು... ಮಹಿಳೆಗೆ ವಿಭೂತಿ ಎರಚಿ ಲಕ್ಷಾಂತರ ರೂ. ದೋಚಿದ ಚೋರ

ಹಾಡಹಗಲೇ ಮಾಂತ್ರಿಕ ಚೋರನೊಬ್ಬ ಭಿಕ್ಷೆ ಕೇಳುವ ನೆಪದಲ್ಲಿ ಬಂದು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕುಣಿಗಲ್ ತಾಲೂಕಿನ ಬೋರೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.

Theft at Boregaudanapaly
ತುಮಕೂರಿನಲ್ಲಿ ಹಾಡಹಗಲೇ ಕಳ್ಳತನ

By

Published : Jan 13, 2020, 9:24 PM IST

ತುಮಕೂರು: ಹಾಡಹಗಲೇ ಮಾಂತ್ರಿಕ ಚೋರನೊಬ್ಬ ಭಿಕ್ಷೆ ಕೇಳುವ ನೆಪದಲ್ಲಿ ಬಂದು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕುಣಿಗಲ್ ತಾಲೂಕಿನ ಬೋರೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಮುಖಕ್ಕೆ ವಿಭೂತಿ ಎಸೆದು ಆಕೆಯ ಜ್ಞಾನ ತಪ್ಪಿಸಿ, ಮನೆಯಲ್ಲಿದ್ದ 1.50 ಲಕ್ಷ ರೂ. ಹಣ, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿದ್ದಾನೆ.

ಇಂದು ಬೆಳಗ್ಗೆ ಸುಮಾರು 9.30ರ ವೇಳೆಯಲ್ಲಿ ಗ್ರಾಮದ ನಾಗರಾಜ್ ಪತ್ನಿ ವಿಜಯಲಕ್ಷ್ಮಿ ಈ ರೀತಿಯ ವಂಚನೆಗೆ ಒಳಗಾಗಿದ್ದಾರೆ. ನಾಗರಾಜು ತಮ್ಮ ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸಲು ತೆರಳಿದ್ದರು. ಹೊಂಚು ಹಾಕಿ ಕುಳಿತಿದ್ದ ಮಾಂತ್ರಿಕ ವಿಜಯಲಕ್ಷ್ಮಿ ಬಳಿ ಬಂದು ಭಿಕ್ಷೆ ಕೇಳಿದ್ದಾನೆ. ಮನೆಯೊಳಗಿದ್ದ ವಿಜಯಲಕ್ಷ್ಮಿ ಹೊರಗೆ ಬಂದು ಭಿಕ್ಷೆ ಇಲ್ಲ ಎಂದು ಹೇಳಿದ್ದಾರೆ.

ಆದರೆ ಭಿಕ್ಷೆಗಾಗಿ ವಿಜಯಲಕ್ಷ್ಮಿ ಬಳಿ ಗೋಗರೆದಿದ್ದು, ವಿಜಯಲಕ್ಷ್ಮಿ ಮನೆ ಒಳಗಿನಿಂದ ಅಕ್ಕಿ ತೆಗೆದುಕೊಂಡು ಬಂದು ಭಿಕ್ಷುಕನಿಗೆ ಕೊಡಲು ಮುಂದಾಗಿದ್ದರು. ಈ ವೇಳೆ ಕ್ಷಣಾರ್ಧದಲ್ಲಿ ವಿಭೂತಿ ಪುಡಿಯನ್ನು ಮುಖಕ್ಕೆ ಎರಚಿದ್ದು, ತಕ್ಷಣ ವಿಜಯಲಕ್ಷ್ಮಿ ಅಲ್ಲಿಯೇ ಮೂರ್ಚೆ ಹೋಗಿದ್ದಾರೆ. ಬಳಿಕ ಒಳನುಗ್ಗಿ ಲೂಟಿ ಮಾಡಿ ಪರಾರಿಯಾಗಿದ್ದಾನೆ.

ಮಕ್ಕಳನ್ನು ಶಾಲೆಗೆ ಕಳಿಸಿ ಮನೆ ಎದುರು ಬಂದ ನಾಗರಾಜ್, ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಎಚ್ಚರಗೊಂಡ ಪತ್ನಿಯಿಂದ ವಿಷಯ ತಿಳಿದ ನಾಗರಾಜ್ ಅಕ್ಕಪಕ್ಕ ಮನೆಯವರೊಂದಿಗೆ ಭಿಕ್ಷುಕನನ್ನು ಹುಡುಕಾಟ ನಡೆಸಿದ್ರೂ ಆತ ಪತ್ತೆಯಾಗಲಿಲ್ಲ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವಿಜಯಲಕ್ಷ್ಮಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತು ಕುಣಿಗಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details