ತುಮಕೂರು: ಮಳೆಗಾಗಿ ಮೊರೆಹೋದ ತುಮಕೂರಿನ ಗ್ರಾಮಸ್ಥರು ಕೆರೆಯಲ್ಲಿ ಹೋಮ - ಹವನ ಮಾಡಿಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಧರ್ಮಸಾಗರದಲ್ಲಿ ನಡೆದಿದೆ. ಧರ್ಮಸಾಗರ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ನೀರಿಲ್ಲದೇ ಬತ್ತಿ ಹೋಗಿರುವ ಕೆರೆಯಲ್ಲಿ ಪುರೋಹಿತರ ನೇತೃತ್ವದಲ್ಲಿ ವಿಶೇಷ ಹೋಮ - ಹವನ ಮಾಡಿಸಿದರು.
ಮಳೆಗಾಗಿ ಪ್ರಾರ್ಥನೆ: ಕೆರೆಯಲ್ಲಿ ಹೋಮ - ಹವನ ನಡೆಸಿದ ಗ್ರಾಮಸ್ಥರು - ಕೆರೆಯಲ್ಲಿ ಹೋಮ-ಹವನ ನಡೆಸಿದ ಗ್ರಾಮಸ್ಥರು
ಧರ್ಮಸಾಗರ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ನೀರಿಲ್ಲದೇ ಬತ್ತಿ ಹೋಗಿರುವ ಕೆರೆಯಲ್ಲಿ ಮಳೆಗಾಗಿ ಪುರೋಹಿತರ ನೇತೃತ್ವದಲ್ಲಿ ವಿಶೇಷ ಹೋಮ - ಹವನ ಮಾಡಿಸಿದರು.
ಮಳೆಗಾಗಿ ಪ್ರಾರ್ಥನೆ
ಧರ್ಮಸಾಗರ ಕೆರೆಯಂಗಳದಲ್ಲಿ ಗ್ರಾಮದ ದೇವರುಗಳನ್ನ ಕೂರಿಸಿ ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿದರು. ಗಣಪತಿ ಹೋಮ, ಗಂಗಾಪೂಜೆ, ಮಳೆರಾಯನ ಪೂಜೆ, ಗ್ರಾಮ ದೇವರ ಪೂಜಾ ಕಾರ್ಯಕ್ರಮಗಳನ್ನು ವಿಧಿವಿಧಾನದಂತೆ ನಡೆಸಲಾಯಿತು.
ಮುಂಗಾರಿನಲ್ಲಿ ಬೆಳೆ ತೆನೆ ಒಡೆಯದೇ ಬಾಡುತ್ತಿರುವ ಹಿನ್ನೆಲೆ ಆತಂಕಕ್ಕೆ ಒಳಗಾಗಿರುವ ರೈತರು, ಮಳೆಗಾಗಿ ಪೂಜೆ ಮೊರೆ ಹೋಗಿದ್ದಾರೆ.