ತುಮಕೂರು :ಭಕ್ತ ಆಂಜನೇಯನ ಹೃದಯದಲ್ಲಿ ಶ್ರೀರಾಮ ಇದ್ದಾನೆ ಎಂಬುದನ್ನ ನಾವು ಪುರಾಣ ಪ್ರವಚನದಲ್ಲಿ ಕೇಳಿದ್ದೇವೆ. ಆದ್ರೆ ತುಮಕೂರಿನ ದೇಶಭಕ್ತರು ಆಂಜನೇಯನ ಹೃದಯ ಕಮಲದಲ್ಲಿ ತ್ರಿವರ್ಣ ಧ್ವಜವನ್ನು ಇಟ್ಟು ಪೂಜಿಸುತ್ತಿದ್ದು ವಿಶೇಷವಾಗಿದೆ.
ರಾಮ ಬಂಟನ ಹೃದಯದಲ್ಲಿ ಮೂಡಿದ ತ್ರಿವರ್ಣ ಧ್ಚಜ! - Devotee Anjaneya
ತುಮಕೂರಿನ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ವಿಶೇಷ ಪೂಜೆ ಸಲುವಾಗಿ ಬೆಣ್ಣೆ ಅಲಂಕಾರ ಮಾಡಿ ಹೃದಯ ಸ್ಥಳದಲ್ಲಿ ರಾಷ್ಟ್ರ ಧ್ವಜನವನ್ನಿಟ್ಟು ಪೂಜಿಸಲಾಯಿತು.

ಬಯಲು ಆಂಜನೇಯ ಸ್ವಾಮಿ
ರಾಮ ಬಂಟನ ಹೃದಯದಲ್ಲಿ ಮೂಡಿದ ತ್ರಿವರ್ಣ ಧ್ಚಜ
ನಗರದ ಹನುಮಂತಪುರ ಬದವಣೆಯಲ್ಲಿರುವ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ವಿಶೇಷ ಪೂಜೆ ನೆರವೇರಿಸಲಾಯಿತು. ಆಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿವಿಧ ಫಲಪುಷ್ಪಗಳಿಂದ ಸಿಂಗರಿಸಿ, ಸ್ವಾಮಿಯ ವೃಕ್ಷಸ್ಥಲದಲ್ಲಿ ಕಾಗದದ ತ್ರಿವರ್ಣ ಧ್ವಜ ಅಂಟಿಸಲಾಗಿದೆ. ಅದೇ ರೀತಿ ಬಲಗೈಯಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ.