ತುಮಕೂರು:ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಸ್ವಂತ ತಂದೆಯನ್ನೇ ಮಗನೊಬ್ಬ ಕೊಲೆ ಮಾಡಿರುವ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾರುತಿ ನಗರದ ಸಣ್ಣಯ್ಯ (65) ಕೊಲೆಯಾದವರಾಗಿದ್ದು, ಆರೋಪಿ ಮಗ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಸಣ್ಣಯ್ಯ ಅವರಿಗೆ ಮೂರು ಜನ ಮಕ್ಕಳು. ಮೂರನೇ ಮಗನಿಗೆ ಈಗಾಗಲೇ ಮದುವೆ ಮಾಡಲಾಗಿದ್ದು, ಎರಡನೇ ಮಗ ವೆಂಕಟೇಶ್, ತನಗೆ ಮದುವೆ ಮಾಡುವಂತೆ ಕುಡಿದು ಬಂದು ಪೀಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಏಕಾಏಕಿ ಬಂದು ತಂದೆ ಸಣ್ಣಯ್ಯ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.