ತುಮಕೂರು: ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮಿಡತೆಗಳ ಹಾವಳಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಮಿಡತೆಗಳು ಸಧ್ಯ ಎಕ್ಕೆ ಗಿಡಗಳ ಮೇಲೆ ದಾಳಿ ಮಾಡಿದ್ದು, ಜನರು ಭಯ ಭೀತರಾಗಿದ್ದಾರೆ.
ಶಿರಾ: ಎಕ್ಕೆ ಗಿಡಗಳ ಮೇಲೆ ಮಿಡತೆಗಳ ಹಿಂಡು, ಬೆಂಕಿ ತಾಗಿಸಿದರೂ ಬೆದರುತ್ತಿಲ್ಲ - Tumkur GrasshopperAnxiety
ಶಿರಾ ತಾಲೂಕಿನ ಗಂಗನಹಳ್ಳಿಯಲ್ಲಿ ಹಸಿರು ಮಿಡತೆಗಳು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಶಿರಾ ತಾಲೂಕಿನ ಗಂಗನಹಳ್ಳಿಯಲ್ಲಿ ಹಸಿರು ಮಿಡತೆಗಳು ಕಾಣಿಸಿಕೊಂಡಿದ್ದು, ಇವು ಗಿಡಗಳ ಎಲೆಗಳನ್ನು ತಿನ್ನುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳೆಗಳ ಮೇಲೆ ದಾಳಿ ಮಾಡಬಹುದು ಎಂದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗುಂಪು ಗುಂಪಾಗಿ ಗಿಡಗಳ ಮೇಲೆ ಕಾಣಿಸಿಕೊಂಡಿರುವ ಈ ಮಿಡತೆಗಳು ಬೆಂಕಿ ತಾಗಿಸಿದರು ಹಾರಿ ಹೋಗುತ್ತಿಲ್ಲ.
ಸಧ್ಯ ಮುಂಗಾರು ಶುರುವಾಗಿದ್ದು ಬಿತ್ತನೆ ಕಾರ್ಯ ಶುರುವಾಗಿದೆ. ಶಿರಾ ತಾಲೂಕಿನಲ್ಲಿ ಶೇಂಗಾ, ರಾಗಿ, ಅಲಸಂದೆ, ತೊಗರಿ, ಜೋಳದ ಬೆಳೆಗಳನ್ನು ಅಧಿಕವಾಗಿ ಬೆಳೆಯುವುದರಿಂದ ಈ ಮಿಡತೆಗಳು ನಮ್ಮ ಬೆಳೆಗಳನ್ನು ಹಾನಿ ಮಾಡಬಹುದೆಂಬ ಭಯದಲ್ಲೇ ಜಮೀನಿನ ಕೆಲಸ ಕಾರ್ಯ ಮಾಡುತ್ತಿದ್ದಾರೆ.