ತುಮಕೂರು:ಮೂರು ಗ್ರಾಮಗಳಲ್ಲಿ ಒಂದೇ ವರ್ಷದಲ್ಲಿ ಐದು ಮಂದಿ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಈ ಪ್ರದೇಶಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.
ಒಟ್ಟು 46 ಟ್ರ್ಯಾಕ್ ಕ್ಯಾಮೆರಾಗಳನ್ನು ಚಿರತೆಗೆ ಬಲಿಯಾಗಿದ್ದ ಜನರು ವಾಸಿಸುತ್ತಿದ್ದ ಪ್ರದೇಶದಲ್ಲಿ ಅಳವಡಿಸಲಾಗಿತ್ತು. ಈ ಮೂಲಕ ಚಿರತೆಯ ಚಲನವಲನವನ್ನು ಸಂಗ್ರಹಿಸಲಾಗುತ್ತಿತ್ತು. ಹೀಗೆ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಗಂಡು ಚಿರತೆ ಅತಿ ಹೆಚ್ಚು ಬಾರಿ ಸೆರೆಯಾಗಿತ್ತು.
ಒಂದು ವರ್ಷದಿಂದ ಈ ಗಂಡು ಚಿರತೆ ಓಡಾಡುತ್ತಿದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ಟ್ರ್ಯಾಪ್ ಬೋನ್ ಸಹ ಅಳವಡಿಸಿದೆ. ಆದ್ರೆ ಚಿರತೆ ಮಾತ್ರ ಬೋನಿಗೆ ಬೀಳುತ್ತಿರಲಿಲ್ಲ. ಇದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ತಲೆನೋವು ತರಿಸಿತ್ತು.