ತುಮಕೂರು:ಲಾಕ್ಡೌನ್ ಸಮಯದಲ್ಲಿ ನಗರವನ್ನು ಸ್ವಚ್ಛತೆಯಿಂದ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ಗೌರವಿಸುವ ಜೊತೆಗೆ ಸ್ವಾಭಿಮಾನ ಜನಮತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಪೌರ ಕಾರ್ಮಿಕರ 'ಶ್ರಮ'ವನ್ನು ಗುರುತಿಸಿದ ಜನಮತ ಚಾರಿಟೇಬಲ್ ಟ್ರಸ್ಟ್... ಆಹಾರ ಕಿಟ್ ವಿತರಣೆ
ಕೊರೊನಾ ಬಂದಿರುವ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕೆಂದು ಹೇಳಲಾಗಿದೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಬೆಳಗಿನ ಜಾವದಿಂದ ಸಂಜೆಯವರೆಗೂ ನಗರವನ್ನು ಶುಚಿಗೊಳಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಜನಮತ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಸದಾಶಿವಯ್ಯ ತಿಳಿಸಿದರು.
ಪೌರ ಕಾರ್ಮಿಕರ 'ಶ್ರಮ'ವನ್ನು ಗುರುತಿಸಿದ ಜನಮತ ಚಾರಿಟಬಲ್ ಟ್ರಸ್ಟ್
ಈ ವೇಳೆ ಮಾತನಾಡಿದ ಟ್ರಸ್ಟ್ ನ ಉಪಾಧ್ಯಕ್ಷ ಸದಾಶಿವಯ್ಯ, ಕೊರೊನಾ ಬಂದಿರುವ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕು ಎಂದು ಹೇಳಲಾಗಿದೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಬೆಳಗಿನಿಂದ ಸಂಜೆಯವರೆಗೂ ನಗರವನ್ನು ಶುಚಿಗೊಳಿಸಲು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ವಾರಿಯರ್ಸ್ನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆ ಪೌರ ಕಾರ್ಮಿಕರನ್ನು ಗೌರವಿಸುವ ಜೊತೆಗೆ ಆಹಾರದ ಕಿಟ್ ವಿತರಿಸಿದ್ದೇವೆ ಎಂದರು.