ಕರ್ನಾಟಕ

karnataka

ETV Bharat / state

ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡಿದ್ದು ದೇಶದ್ರೋಹವಲ್ಲ: ವಿವಾದ ಸೃಷ್ಟಿಸಿದ ಸಚಿವ ಮಾಧುಸ್ವಾಮಿ ಹೇಳಿಕೆ - ಮಹಾರಾಷ್ಟ್ರದ ಚುನಾವಣೆ

ಡಿಕೆಶಿ ತನಿಖೆಗೆ ಸಹಕರಿಸಿಲ್ಲ ಎಂದು ಬಂಧಿಸಿದ್ದಾರೆ. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಇಡಿಯನ್ನ ಪ್ರಶ್ನೆ ಮಾಡುವ ಅಧಿಕಾರ ನಮಗಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಮಾಧುಸ್ವಾಮಿ

By

Published : Sep 5, 2019, 2:59 PM IST

Updated : Sep 6, 2019, 10:35 AM IST

ತುಮಕೂರು:ದ್ವೇಷದ ರಾಜಕಾರಣ ಮಾಡುವ ಅನಿವಾರ್ಯತೆ ನಮಗೆ ಬಂದಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಸಚಿವ ಮಾಧುಸ್ವಾಮಿ

ಡಿ.ಕೆ.ಶಿವಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆಗೆ ಸಹಕರಿಸಿಲ್ಲ ಎಂದು ಬಂಧಿಸಿದ್ದಾರೆ. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಇಡಿಯನ್ನ ಪ್ರಶ್ನೆ ಮಾಡುವ ಅಧಿಕಾರ ನಮಗಿಲ್ಲ. ಎಲ್ಲಾ ರಾಜಕೀಯ ನಾಯಕರ ಮೇಲೂ ದಾಳಿ ನಡೆದಿದೆ. ನನ್ನ ಪ್ರಕಾರ ಬಂದ್ ಹಾಗೂ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ಗುರಿಯಾಗಿಸಿಜೊಂಡು ಪ್ರತಿಭಟನೆ ಮಾಡುವ ಅಗತ್ಯತೆ ಇಲ್ಲ ಎಂದರು.

ಅರ್ಥಿಕ ಹಿಂಜರಿತ ಬಗ್ಗೆ ಪ್ರತಿಕ್ರಿಯಿಸಿ, ಆರ್ಥಿಕ ಹಿಂಜರಿತ ಸ್ವಲ್ಪ ಮಟ್ಟಿಗೆ ಆಗಿರೋದು ನಿಜ. ಉತ್ಪಾದನಾ ವಲಯದಲ್ಲಿ ಅದರ ಪರಿಣಾಮ ಬೀರಿದೆ. ಅದನ್ನ ಮೇಲೆತ್ತುವ ಕೆಲಸ ನಡೀತಿದೆ. ಇದಕ್ಕೆ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಹೇಳಲಿಕ್ಕೆ ಆಗೋದಿಲ್ಲ . ಸ್ವಲ್ಪ ಮಟ್ಟಿಗೆ ಜಿಎಸ್​ಟಿ ಹೊರೆ ಇದೆ. ಮುಂದಿನ ದಿನದಲ್ಲಿ ಸರಿ ಹೋಗಲಿದೆ ಎಂದರು.

ವಿಧಾನಸೌದದಲ್ಲಿ ವಿಡಿಯೋ ನೋಡಿದ್ದು ದೇಶದ್ರೋಹದ ಕೆಲಸವಲ್ಲ. ಅದೊಂದು ಆಕಸ್ಮಿಕ ಘಟನೆ. ಆದರೂ ಅದು ತಪ್ಪು. ಅದೊಂದೇ ವಿಚಾರ ಇಟ್ಟುಕೊಂಡು ಡಿಸಿಎಂ ಪದವಿ ಕೊಟ್ಟಿದ್ದು ತಪ್ಪು ಎನ್ನುವಂತಿಲ್ಲ. ಮಹಾರಾಷ್ಟ್ರದ ಚುನಾವಣೆಯಲ್ಲಿ ಸವದಿ ಪ್ರಮುಖ ಪಾತ್ರ ವಹಿಸಿದ್ರು. ಆ ಕಾರಣದಿಂದ ಗುರುತಿಸಿ ಪದವಿ ಕೊಟ್ಟಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಅದೇ ಕಾರಣ ಇಟ್ಟುಕೊಂಡು ಹೇಳಿಕೆ ನೀಡ್ತಿದ್ದಾರೆ. ಅವರ ಪ್ರತಿಯೊಂದು ಹೇಳಿಕೆಗೂ ಪ್ರತಿಕ್ರಿಯೆ ನೀಡಬಹುದು. ಅದನ್ನ ಮಾಡಲಿಕ್ಕೆ ನಾವು ಹೋಗಲ್ಲ ಎಂದರು.

Last Updated : Sep 6, 2019, 10:35 AM IST

ABOUT THE AUTHOR

...view details