ತುಮಕೂರು : 5ನೇತರಗತಿ ವಿದ್ಯಾರ್ಥಿನಿಯೊಬ್ಬಳು ತಾನು ವಾಸವಾಗಿರುವ ಗುಡಿಸಲಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ ಎಂದು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತ್‌ಗೆ ಬಿದರೆಗುಡಿ ಗ್ರಾಮದ ಜಿ. ವಾಣಿ ಎಂಬ ಬಾಲಕಿ, ನನಗೆ ಓದುವ ಆಸೆಯಿದೆ. ಆದ್ರೆ, ಮನೆಯಲ್ಲಿ ವಿದ್ಯುತ್ ಸೌಲಭ್ಯವಿರುವುದಿಲ್ಲ. ದಯವಿಟ್ಟು ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಿ ಎಂದು ಅವಲತ್ತುಕೊಂಡಿದ್ದಾಳೆ.
ನಾನೂ ಓದಬೇಕು ನನ್ನ ಗುಡಿಸಲಿಗೆ ವಿದ್ಯುತ್ ಕಲ್ಪಿಸಿ.. ಗ್ರಾಮ ಪಂಚಾಯತ್‌ಗೆ ಬಾಲಕಿ ಮನವಿ.. - ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ
ಡಿಡಿ ಚಂದನದಲ್ಲಿ ಪಾಠ ಬರುತ್ತಿದ್ದು, ಬೇರೊಬ್ಬರ ಮನೆಗೆ ಹೋಗಲು ಆಗುತ್ತಿಲ್ಲ. ನನ್ನ ಮನೆಯಲ್ಲಿ ವಿದ್ಯುತ್ ಸೌಕರ್ಯವಿಲ್ಲ. ತುಂಬ ದಿನದಿಂದ ತೊಂದರೆಯಾಗುತ್ತಿದ್ದು, ತನ್ನ ಶಿಕ್ಷಕಿಗೂ ವಿದ್ಯುತ್ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದೇನೆ..

ಹಾಗೂ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದು, ಮಕ್ಕಳ ಗ್ರಾಮ ಸಭೆಯ ಮಕ್ಕಳ ಧ್ವನಿ ಪೆಟ್ಟಿಗೆ ಮತ್ತು ಬದುಕು ಸಂಸ್ಥೆಗೂ ಮನವಿ ಸಲ್ಲಿಸಿದ್ದಾಳೆ. ಈಕೆ ಬಿದರೆಗುಡಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಡಿಡಿ ಚಂದನದಲ್ಲಿ ಪಾಠ ಬರುತ್ತಿದ್ದು, ಬೇರೊಬ್ಬರ ಮನೆಗೆ ಹೋಗಲು ಆಗುತ್ತಿಲ್ಲ. ನನ್ನ ಮನೆಯಲ್ಲಿ ವಿದ್ಯುತ್ ಸೌಕರ್ಯವಿಲ್ಲ. ತುಂಬ ದಿನದಿಂದ ತೊಂದರೆಯಾಗುತ್ತಿದ್ದು, ತನ್ನ ಶಿಕ್ಷಕಿಗೂ ವಿದ್ಯುತ್ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾಳೆ. ಗುಡಿಸಲಿಗೆ ಶಾಶ್ವತ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಜಿಲ್ಲಾ ಪಂಚಾಯತ್ ಸಿಇಒ ಶುಭ ಕಲ್ಯಾಣ್ ಭರವಸೆ ನೀಡಿದ್ದಾರೆ.