ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಮಾಡುತ್ತಿರುವ ವೇಳೆ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಇರುವುದು ಸಾಕಷ್ಟು ಕಳವಳಕಾರಿಯಾಗಿ ಪರಿಣಮಿಸುತ್ತಿದೆ.
ಸೋಂಕಿನಿಂದ ಮೃತಪಟ್ಟವರ ಬೇಕಾಬಿಟ್ಟಿ ಅಂತ್ಯಸಂಸ್ಕಾರ: ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಆತಂಕ - ಬೇಕಾಬಿಟ್ಟಿಯಾಗಿ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ
ನಿಯಮಾವಳಿಗಳ ಪ್ರಕಾರ ಶವಸಂಸ್ಕಾರ ಮಾಡುವವರು ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ನಿರಂತರ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಆದ್ರೆ ಅನೇಕ ದೃಶ್ಯಾವಳಿಗಳಲ್ಲಿ ಇವುಗಳನ್ನು ಪಾಲನೆ ಮಾಡದಿರುವುದು ಸ್ಪಷ್ಟವಾಗುತ್ತಿದೆ. ಅಲ್ಲದೆ ಶವಗಳನ್ನು ಹೂಳುವ ವೇಳೆ ಗುಂಡಿಯಲ್ಲಿಯೇ ಜನರು ಇಳಿದು ಸಂಸ್ಕಾರ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಾರೆ.
ಮುಖ್ಯವಾಗಿ ಈಗಾಗಲೇ ಸರ್ಕಾರ ಅವಕಾಶ ನೀಡಿರುವಂತೆ ತಮ್ಮ ಜಮೀನುಗಳಲ್ಲಿಯೇ ಕೊರೊನಾ ಸೋಂಕಿತರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಲು ಜನರು ಮುಂದಾಗಿದ್ದಾರೆ. ಆದರೆ ಶವವನ್ನು ಅಂತ್ಯಸಂಸ್ಕಾರ ಮಾಡುವ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಜನರು ಮಾಸ್ಕ್ ಧರಿಸಿಕೊಂಡಿರೋದನ್ನು ಹೊರತುಪಡಿಸಿ, ಮತ್ತಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ.
ನಿಯಮಾವಳಿಗಳ ಪ್ರಕಾರ ಶವಸಂಸ್ಕಾರ ಮಾಡುವವರು ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ನಿರಂತರ ಸ್ಯಾನಿಟಿಸ್ ಮಾಡಿಕೊಳ್ಳಬೇಕು. ಆದ್ರೆ ಅನೇಕ ದೃಶ್ಯಾವಳಿಗಳಲ್ಲಿ ಇವುಗಳನ್ನು ಪಾಲನೆ ಮಾಡದಿರುವುದು ಸ್ಪಷ್ಟವಾಗುತ್ತಿದೆ. ಅಲ್ಲದೆ ಶವಗಳನ್ನು ಹೂಳುವ ವೇಳೆ ಗುಂಡಿಯಲ್ಲಿಯೇ ಜನರು ಇಳಿದು ಸಂಸ್ಕಾರ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಾರೆ. ಇನ್ನು ಈ ರೀತಿಯ ಶವಸಂಸ್ಕಾರವನ್ನು ಮಾಡುವುದರಿಂದ ಸೋಂಕು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡಲು ಕಾರಣವಾಗಿದೆ. ಕನಿಷ್ಠ ಆರೋಗ್ಯ ಇಲಾಖೆ ಸಿಬ್ಬಂದಿ ಮುಂದೆ ನಿಂತು ಈ ಕುರಿತು ಗಮನ ಹರಿಸಬೇಕಿದೆ. ಅಲ್ಲದೆ ಶವಸಂಸ್ಕಾರ ಮಾಡುವ ಜನರಿಗೆ ಕನಿಷ್ಠ ಅರಿವು ಮತ್ತು ಮಾರ್ಗದರ್ಶನ ನೀಡುವುಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ.
TAGGED:
The funeral of those