ಕರ್ನಾಟಕ

karnataka

ತುಮಕೂರು ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಏಕಕಾಲಕ್ಕೆ ಪೂರ್ಣಗೊಳಿಸುವ ನಿರ್ಧಾರ : ಅಜಯ್

By

Published : Dec 3, 2019, 10:02 PM IST

ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ತೆಗೆದುಕೊಳ್ಳುವ ಬದಲು ಏಕಕಾಲದಲ್ಲಿ ಪೂರ್ಣಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಜಯ್ ತಿಳಿಸಿದ್ದಾರೆ.

Tumkur smart road development project
ತುಮಕೂರು ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಏಕಕಾಲಕ್ಕೆ ಪೂರ್ಣಗೊಳಿಸುವ ನಿರ್ಧಾರ : ಅಜಯ್

ತುಮಕೂರು : ನಗರದಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ತೆಗೆದುಕೊಳ್ಳುವ ಬದಲು ಏಕಕಾಲದಲ್ಲಿ ಪೂರ್ಣಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಜಯ್ ತಿಳಿಸಿದ್ದಾರೆ.

ತುಮಕೂರು ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಏಕಕಾಲಕ್ಕೆ ಪೂರ್ಣಗೊಳಿಸುವ ನಿರ್ಧಾರ : ಅಜಯ್

ಈಟಿವಿ ಭಾರತ ಜೊತೆ ಮಾತನಾಡಿದ ಅಜಯ್, ಇದರಿಂದ ಪ್ರಾರಂಭದಲ್ಲಿ ಸಾರ್ವಜನಿಕರಿಗೆ ಕೆಲವು ತೊಂದರೆಗಳಾಗಬಹುದು ಆದರೆ ಏಕಕಾಲದಲ್ಲಿ ಎಲ್ಲಾ ರಸ್ತೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವುದರಿಂದ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು. ನಗರದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣ ಜಾಸ್ತಿಯಾಗಿದ್ದರಿಂದ ಅನಿವಾರ್ಯವಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಹೆಚ್ಚಿನ ಸಮಯವಕಾಶ ನೀಡಲಾಗಿದೆ ಎಂದು ಹೇಳಿದರು.

2020ರ ಜೂನ್-ಜುಲೈ ವೇಳೆಗೆ ತುಮಕೂರು ನಗರದಲ್ಲಿ ತೆಗೆದುಕೊಳ್ಳಲಾಗಿರುವ ಎಲ್ಲಾ ಸ್ಮಾರ್ಟ್ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳಲಿದೆ. ಅದೇ ರೀತಿ ಕುಡಿಯುವ ನೀರಿನ ವ್ಯವಸ್ಥೆ, ಬಿಎಸ್ಎನ್ಎಲ್ ಸೇರಿದಂತೆ ಅಂಡರ್ ಗ್ರೌಂಡ್ ಕೆಲಸಗಳನ್ನು ಮಾಡುತ್ತಿದ್ದ ಇಲಾಖೆಗಳೊಂದಿಗೆ ಸಂವಹನ ಕೊರತೆಯಿತ್ತು. ಇದೀಗ ಇದನ್ನು ಜಿಲ್ಲಾಧಿಕಾರಿ ನಿವಾರಣೆ ಮಾಡಿದ್ದಾರೆ ಎಂದು ತಿಳಿಸಿದರು. ಅಲ್ಲದೇ, ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳು ಪಾರದರ್ಶಕವಾಗಿದೆ. ಎಲ್ಲಿಯೂ ಕೂಡ ಕಳಪೆ ಕಾಮಗಾರಿಗಳಿಗೆ ಅವಕಾಶವಿಲ್ಲ ಜೊತೆಗೆ ಗುಣಮಟ್ಟವನ್ನು ಪರಿಶೀಲಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು.

ABOUT THE AUTHOR

...view details