ಕರ್ನಾಟಕ

karnataka

ETV Bharat / state

ತುಮಕೂರು: ಹೆತ್ತಕೂಸನ್ನು ಬಯಲಿಗೆ ಎಸೆದು ಹೋದ ಅವಿವಾಹಿತೆ, ದೂರು ದಾಖಲು - ಅರೆಗುಜ್ಜನಹಳ್ಳಿ

ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ತುಮಕೂರಿನ ಅರೆಗುಜ್ಜನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Etv Bharatthe-dead-body-of-the-infant-was-found-in-tumakuru
ತುಮಕೂರು: ಹೆತ್ತಕೂಸನ್ನು ಬಯಲಿಗೆ ಎಸೆದು ಹೋದ ಅವಿವಾಹಿತೆ, ದೂರು ದಾಖಲು

By ETV Bharat Karnataka Team

Published : Jan 6, 2024, 8:06 PM IST

ತುಮಕೂರು:ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಅರೆಗುಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿಯೇ ತನ್ನ ಮಗುವನ್ನು ಎಸೆದು ಹೋಗಿದ್ದಾಳೆ. ಗರ್ಭ ಧರಿಸಿದ್ದ 25 ವರ್ಷದ ಅವಿವಾಹಿತೆ, ರಾತ್ರಿ ವೇಳೆ ಹೆರಿಗೆ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಗ್ರಾಮದ ಹೊರ ಭಾಗಕ್ಕೆ ಬಂದು ಸ್ವತಃ ಹೆರಿಗೆ ಮಾಡಿಕೊಂಡಿದ್ದಳು. ಸಮಾಜಕ್ಕೆ ಹೆದರಿ ಶಿಶುವನ್ನು ಅಲ್ಲಿಯೇ ಬಿಟ್ಟು ಬಂದಿದ್ದಳು.

ಬೆಳಗ್ಗೆ ಗ್ರಾಮಸ್ಥರು ಶಿಶುವಿನ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದರು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನವಜಾತ ಶಿಶುವಿನ ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದ್ದರು.

ಈ ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಉಷಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾಸನ: ಮಗು ಮಾರಾಟ ಪ್ರಕರಣ, ತಾಯಿ ಸೇರಿ ಐವರ ಬಂಧನ

ABOUT THE AUTHOR

...view details