ತುಮಕೂರು:ಪೌರಕಾರ್ಮಿಕರು ಶ್ರೇಷ್ಠವಾದ ಕಾರ್ಯಗಳನ್ನು ಮಾಡುತ್ತಿದ್ದು, ಅವರೆಲ್ಲರೂ ಕಾಯಕ ಯೋಗಿಗಳು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಡಾ. ಹೆಚ್ ನಟರಾಜು ಹೊಗಳಿದರು.
ಪೌರಕಾರ್ಮಿಕರು ಶ್ರೇಷ್ಠ ಕಾಯಕ ಯೋಗಿಗಳು : ಡಾ. ಹೆಚ್ ನಟರಾಜು - ಡಾ. ಹೆಚ್ ನಟರಾಜು
ಪೌರಕಾರ್ಮಿಕರು ಶ್ರೇಷ್ಠವಾದ ಕಾರ್ಯಗಳನ್ನು ಮಾಡುತ್ತಿದ್ದು, ಸಮಾಜದ ಕೊಳೆಯನ್ನು ತೊಳೆಯುವ ಅವರು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಅವರಿಂದ ಮಾತ್ರ ಸಾಧ್ಯ ಎಂದು ಡಾ. ಹೆಚ್ ನಟರಾಜು ಅಭಿಪ್ರಾಯಪಟ್ಟರು.
![ಪೌರಕಾರ್ಮಿಕರು ಶ್ರೇಷ್ಠ ಕಾಯಕ ಯೋಗಿಗಳು : ಡಾ. ಹೆಚ್ ನಟರಾಜು](https://etvbharatimages.akamaized.net/etvbharat/prod-images/768-512-3385101-thumbnail-3x2-giri.jpg)
ತುಮಕೂರು ಜಿಲ್ಲಾ ಸಮಿತಿಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕ ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮದಿನಾಚರಣೆ ಅಂಗವಾಗಿ ಪೌರಕಾರ್ಮಿಕರ ಹಾಗೂ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಸ್ಥಿತಿ-ಗತಿಗಳ ಕುರಿತ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿತ್ತು.
ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರು ಶೋಷಿತ ವರ್ಗಗಳ ಕಣ್ಮಣಿಗಳು, ಮಹಾನ್ ಚಿಂತಕರು. ತುಳಿತಕ್ಕೊಳಗಾದವರ ಸಮುದಾಯದ ಏಳಿಗೆಗೆ ಅವರು ನೀಡಿದ ಕೊಡುಗೆ ಅಪಾರ. ಇಂತಹ ವ್ಯಕ್ತಿಗಳ ಚಿಂತನೆ ತತ್ವಾದರ್ಶಗಳನ್ನು ತಿಳಿದುಕೊಳ್ಳಬೇಕು ಎಂದು ಡಾ. ಹೆಚ್ ನಟರಾಜು ಹೇಳಿದರು.